ಕಾಸರಗೋಡು: ಮಚೆರ್ಂಟ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ಸಹಯೋಗದಲ್ಲಿ ಆಯೋಜಿಸಲಾದ ಕಾಸರಗೋಡು ಮರ್ಚಂಟ್ ಟ್ರೋಫಿ ಕೇರಳ ರಾಜ್ಯ 19 ವರ್ಷದೊಳಗಿನವರ ಓಪನ್ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‍ಶಿಪ್‍ನ ಮುಕ್ತ ಪಂದ್ಯಾಟದ ಎಲ್ಲ ವಿಭಾಗದಲ್ಲಿ ಗೆಲುವು ಸಆಧಿಸುವ ಮೂಲಕ ಇಮಟರ್‍ನ್ಯಾಶನಲ್ ಮಾಸ್ಟರ್ ಜುಬಿನ್ ಜಿಮ್ಮಿ (ಕೊಲ್ಲಂ) ಹಾಗೂ ಬಾಲಕಿಯರ ವಿಭಾಗದಲ್ಲಿ 6.5 ಅಂಕದೊಂದಿಗೆ ಜಾಹ್ನವಿ ಅಶೋಕ್(ತಿರುವನಂತಪುರ)ಚಂಪ್ಯನ್‍ಗಳಾಗಿ ಹೊರಹೊಮ್ಮಿದ್ದಾರೆ.
ಜುಬಿನ್ ಜಿಮ್ಮಿ (ಕೊಲ್ಲಮ್), ಅನೆಕ್ಸ್ ಕಂಜಿರವಿಲ ಬಿ.ಸಿ. (ತಿರುವನಂತಪುರ), ಅರ್ಪಿತ್ ಎಸ್ ಬಿಜೋಯ್ (ಕಣ್ಣೂರು) ಹಾಗೂ ನೀರದ್ ಪಿ. (ಕಾಸರಗೋಡು) ಮುಕ್ತ ವಿಭಾಗದಲ್ಲಿ ಮೊದಲ ನಲ್ಕು ಸ್ಥಾನಗಳನ್ನು ಗಳಿಸಿದ್ದಾರೆ. ಇನ್ನು ಬಾಲಕಿಯರ ವಿಭಾಗದಲ್ಲಿ ಜಾಹ್ನವಿ ಅಶೋಕ್ (ತಿರುವನಂತಪುರಂ), ಅಮೇಯ ಎ.ಆರ್ (ತಿರುವನಂತಪುರಂ), ಪೌರ್ಣಮಿ Sಆ, (ಕೊಲ್ಲಂ) ಹಾಗೂ ನಿರಂಜನ ಎನ್ (ಕೊಲ್ಲಂ)ಆಯ್ಕೆಯಾದರು.
ಕೆವಿವಿಇಎಸ್ ಜಿಲ್ಲಾಧ್ಯಕ್ಷ ಕೆ. ಅಹಮದ್ ಶರೀಫ್, ಕಾಸರಗೋಡು ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಅಧ್ಯಕ್ಷ ಪಿ. ಹಬೀಬ್ ರಹಿಮಾನ್, ಎ. ಎ. ಅಜೀಜ್. ಟಿ. ಎ. ಇಲ್ಯಾಸ್, ಶ್ರೀ. ಮಾಹಿನ್ ಕೋಳಿಕ್ಕರ, ದಿನೇಶ್ ಕೆ, ಟಿ. ವಿ. ಅನ್ವರ್ ಸಾದತ್, ನೆಹಿಮ್ ಅಂಗೋಲಾ ವಿಜೇತರಿಗೆ ಬಹುಮಾನ ವಿತರಿಸಿದರು. ಶಶಿಧರನ್ ಕಾಸರಗೋಡು, ಮುನೀರ್ ಎಂ.ಎಂ, ಸಿ.ಕೆ.ಹಾರಿಸ್, ಅಜಿತ್, ಶರಫುದ್ದೀನ್, ರವೂಫ್, ಲತೀಫ್ ಕೆ.ಎಂ ಮತ್ತು ಲತೀಫ್ ಕೆ.ಎ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು. ರಾಜ್ಯ ಚೆಸ್ ತಾಂತ್ರಿಕ ಸಮಿತಿ ಸಂಚಾಲಕ ವಿನು ಭಾಸ್ಕರ್ ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಸಂಚಾಲಕ ರಾಜೇಶ್ ವಂದಿಸಿದರು.