ಉಪ್ಪಳ: ವಿಶ್ವಕರ್ಮ ಸಮಾಜ ಸೇವಾ ಸಂಘ ಬಾಯಾರು ಆಶ್ರಯದಲ್ಲಿ ಬಾಯಾರು ವಿಶ್ವಕರ್ಮ ಸಭಾ ಭÀವನದಲ್ಲಿ ವಿಶ್ವಕರ್ಮ ಪೂಜೆ ವಿಧಿವತ್ತಾಗಿ ನೆರವೇರಿಸಲಾಯಿತು. ನಂತರ ಸಭಾ ಕಾರ್ಯಕ್ರಮ ಜರಗಿತು. ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಆಚಾರ್ಯ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದಾದ್ಯಂತ ಇಂದು ವಿಶ್ವಕರ್ಮ ದಿನಾಚರಣೆಯನ್ನು ಆಚರಿಸುವ ಈ ಸಂತಸದ ಸಮಯದಲ್ಲಿ ವಿಶ್ವಕರ್ಮರಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪಿ ಎಂ ವಿಶ್ವಕರ್ಮ ಯೋಜನಾ ಕಾರ್ಯರೂಪಕ್ಕೆ ತಂದಿರುವುದು, ವಿಶ್ವಕರ್ಮರಿಗೆ ಒಂದು ಹೆಮ್ಮೆಯ ವಿಷಯ ಎಂದರು.
ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನಾಚರಣೆಯ ಈ ಸಂದಭರ್Àದಲ್ಲಿ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ರಾಧಾಕೃಷ್ಣ ಕುಂಬಳೆ ಮತ್ತು ಪದ್ಮನಾಭ ಶರ್ಮ ಚಿತ್ರಮೂಲ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ನಂತರ ‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಲೆ ಜರಗಿತು. ರಾಮಚಂದ್ರ ಆಚಾರ್ಯ, ಯೋಗೇಂದ್ರ ಆಚಾರ್ಯ, ಸೀತಾರಾಮ ಆಚಾರ್ಯ, ಪುನೀತ್ ಆಚಾರ್ಯ ಉಪಸ್ಥಿತರಿದ್ದರು. ಮಂಜುನಾಥ ಆಚಾರ್ಯ ನಿರೂಪಿಸಿದರು. ಸುರೇಶ ಆಚಾರ್ಯ ಸ್ವಾಗತಿಸಿ, ವಿಷ್ಣು ಆಚಾರ್ಯ ವಂದಿಸಿದರು.