ಪಾಲಕ್ಕಾಡ್: ಒಟ್ಟಪಾಲಂ ರೈಲು ನಿಲ್ದಾಣದ ಬಳಿ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಬುಧವಾರ ರಾತ್ರಿ ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ಕೇರಳ ಎಕ್ಸ್‍ಪ್ರೆಸ್ ಮೇಲೆ ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಬಿ3 ಕೋಚ್‍ನ ಕಿಟಕಿಯ ಗಾಜು ಒಡೆದಿದೆ.
ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಇದಕ್ಕೂ ಮುನ್ನ ವಂದೇಭಾರತ್, ರಾಜಧಾನಿ ಎಕ್ಸ್‍ಪ್ರೆಸ್ ಮತ್ತು ವೇನಾಡ್ ರೈಲುಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ವಂದೇಭಾರತ್ ಮೇಲೆ ನಡೆದ ಕಲ್ಲು ತೂರಾಟದಲ್ಲಿ ರೈಲಿನ ಗಾಜುಗಳು ಒಡೆದಿದ್ದವು.