ಇದೀಗ ರಾಜ್ಯದಲ್ಲಿ ಮಕ್ಕಳಿಗೆ ಅಡೆನೋವೈರಸ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಈ ಅಡೆನೋವೈರಸ್ ಸೋಂಕು ಎಂದರೇನು? ಇದು ಹೇಗೆ ಹರಡುವುದು? ಇದರ ಲಕ್ಷಣಗಳೇನು? ಇದು ಅಪಾಯಕಾರಿಯೇ ಮತ್ತಿತರ ಮಾಹಿತಿ ತಿಳಿಯೋಣ ಬನ್ನಿ:
ಅಡೆನೋವೈರಸ್ ಎಂದರೇನು?
ಅಡೆನೋವೈರಸ್ ಎಂಬುವುದು ಶೀತ, ಜ್ವರ ತರುವಂಥ ವೈರಸ್ ಆಗಿದೆ. ಸುಮಾರು 50ಕ್ಕೂ ಅಧಿಕ ಅಡೆನೋವೈರಸ್ ಮನುಷ್ಯರನ್ನು ಬಾಧಿಸುತ್ತದೆ, ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದು. ಈ ವರ್ಷ ವಾತಾವರಣದಲ್ಲೂ ಹಲವು ಬದಲಾವಣೆ ಕಂಡು ಬಂದಿದೆ, ಮಳೆಗಾಲದಲ್ಲಿ ಮಳೆ ಸರಿಯಾಗಿ ಬೀಳಲಿಲ್ಲ, ಇದೀಗ ಮಳೆ ಬರುತ್ತಿದೆ, ಇದರ ಜೊತೆಗೆ ಈ ಬಗೆಯ ಸೋಂಕುಗಳು ಹೆಚ್ಚಾಗುತ್ತಿದೆ.
ಅಡೆನೋವೈರಸ್ ಲಕ್ಷಣಗಳೇನು?
* ಕೆಮ್ಮು
* ಜ್ವರ
* ಶೀತ
* ಗಂಟಲು ಕೆರೆತ
* ಕಣ್ಣು ಕೆಂಪಾಗುವುದು
* ಕಿವಿ ನೋವು
* ಗಂಟಲಿನಲ್ಲಿ ಊತ
* ಉಸಿರಾಟದಲ್ಲಿ ತೊಂದರೆ ಉಂಟಾಗುವುದು (ಬ್ರಾಂಕೈಟಿಸ್)
* ನ್ಯೂಮೊನಿಯಾ
ಅಡೆನೋವೈರಸ್ ತಗುಲಿದರೆ ಎಷ್ಟು ದಿನ ಇರುತ್ತದೆ?
ಅಡೆನೋವೈರಸ್ ತಗುಲಿದರೆ ಕೆಲವರಿಗೆ 3-4 ದಿನದಲ್ಲಿ ಕಡಿಮೆಯಾದರೆ ಇನ್ನು ಕೆಲವರಿಗೆ ಲಕ್ಷಣಗಳು 2 ವಾರದವರೆಗೆ ಇರಲಿದೆ.
ಅಡೆನೋವೈರಸ್ ಹೇಗೆ ಹರಡುವುದು?
ಕ್ಲೋಸ್ ಕಾಂಟ್ಯಾಕ್ಟ್: ಕೈ ಕುಲುಕುವುದರಿಂದ, ಜೊತೆಗೆ ಆಟ ಆಡುವುದರಿಂದ, ತಬ್ಬಿಕೊಳ್ಳುವುದು, ಕಿಸ್ ಕೊಡುವುದು ಇವುಗಳಿಂದ ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಗಾಳಿಯ ಮೂಲಕ ಹರಡುವುದು: ಸೀನಿದಾಗ, ಕೆಮ್ಮಿದಾಗ, ಎಂಜಲು ಹಾರಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಟಾಯ್ಲೆಟ್: ಟಾಯ್ಲೆಟ್ ಸ್ವಚ್ಛವಾಗಿರದಿದ್ದರೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು
* ನೀರು: ಸೋಂಕು ತಗುಲಿದ ವ್ಯಕ್ತಿ ಈಜಿದ ಕೊಳದಲ್ಲಿ ಈಜಾಡಿದರೆ ಕೂಡ ಹರಡುವುದು.
ಅಡೆನೋವೈರಸ್‌ಗೆ ಚಿಕಿತ್ಸೆಯೇನು?
ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಕಣ್ಣು ಕೆಂಪಾಗಿದ್ದರೆ ಕಣ್ಣಿಗೆ ಡ್ರಾಪ್ ನೀಡಲಾಗುವುದು, ಜ್ವರವಿದ್ದರೆ ಜ್ವರ ಕಡಿಮೆಯಾಗಲು ಮಾತ್ರೆ ಅಥವಾ ಸಿರಪ್ ನೀಡಲಾಗುವುದು. ವ್ಯಕ್ತಿಯ ರೋಗ ಲಕ್ಷಣ ನೋಡಿ ಅದರಂತೆ ಚಿಕಿತ್ಸೆ ನೀಡಲಾಗುವುದು. ಇದಕ್ಕೆ Antibiotics ಕೆಲಸ ಮಾಡಲ್ಲ.
ಅಡೆನೋವೈರಸ್ ತಡೆಗಟ್ಟುವುದು ಹೇಗೆ?
* ಕೈಗಳನ್ನು ಆಗಾಗ ತೊಳೆಯಿರಿ
* ಸೋಂಕು ತಗುಲಿದ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಿ.
* ಮಕ್ಕಳು ಮುಟ್ಟಿದ ಟಾಯ್ಸ್ ಸ್ವಚ್ಛಗೊಳಿಸಿ
* ಸಿಂಕ್, ಟಾಯ್ಲೆಟ್ ಸ್ವಚ್ಛವಾಗಿಡಿ.
ಕಾಯಿಲೆ ಬಂದಾಗ ಏನು ಮಾಡಬೇಕು?
* ಹುಷಾರಿಲ್ಲದಿದ್ದರೆ ಮನೆಯಲ್ಲಿರಿ
* ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡ ಹಿಡಿಯಿರಿ
* ರೋಗಿ ಬಳಸಿದ ತಟ್ಟೆ, ಸ್ಪೂನ್ ಇವುಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು.
* ಕೈಗಳನ್ನು ಆಗಾಗ ತೊಳೆಯಿರಿ.
ಯಾವಾಗ ವೈದ್ಯರನ್ನು ಕಾಣಬೇಕು?
* ಜ್ವರ 104°F (40°C)ಗಿಂತ ಅಧಿಕವಿದ್ದರೆ
* ಉಸಿರಾಟದಲ್ಲಿ ತೊಂದರೆ ಉಂಟಾಗಿದ್ದರೆ
* ದೇಹದಲ್ಲಿ ನೀರಿನಂಶ ಕಡಿಮೆಯಾಗಿದ್ದರೆ
* ತುಂಬಾ ಸುಸ್ತು