ಕೊಚ್ಚಿ: ಪ್ರಿಯಕರನಿಗೆ ವಿಷವಿಕ್ಕಿ ಕೊಂದ ಪ್ರಕರಣದಲ್ಲಿ ಆರೋಪಿ ಗ್ರೀಷ್ಮ್ಮಾಗೆ ಜಾಮೀನು ಮಂಜೂರಾಗಿದೆ. ಹೈಕೋರ್ಟ್ ಇಂದು ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಅಕ್ಟೋಬರ್ 31ರಂದು ಗ್ರೀಷ್ಮಾಳನ್ನು ಪೋಲೀಸರು ಬಂಧಿಸಿದ್ದರು. ಪ್ರಕರಣದ ಸಹ ಆರೋಪಿ ತಾಯಿ ಮತ್ತು ಚಿಕ್ಕಪ್ಪನಿಗೆ ನ್ಯಾಯಾಲಯ ನೇರ ಜಾಮೀನು ನೀಡಿದೆ.
ಶರೋನ್ ಹತ್ಯೆ ಭಾರೀ ಸದ್ದು ಮಾಡಿದ ಪ್ರಕರಣವಾಗಿತ್ತು. ಮದ್ಯ ಮತ್ತು ಜ್ಯೂಸ್ ಗೆ ವಿಷ ಬೆರೆಸಿ ತನ್ನ ಪ್ರಿಯಕರ ಶರೋನ್ ನನ್ನು ಅಕ್ಟೋಬರ್ 14, 2022 ರಂದು ಕೊಲೆಗೈದಿದ್ದಳು.
ಜ್ಯೂಸ್ ಮತ್ತು ಮದ್ಯ ಕುಡಿದ ನಂತರ, ಶರೋನ್ ಅಸ್ವಸ್ಥಗೊಂಡಿದ್ದ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಳಿಕ ಸಾವಿಗೀಡಾಗಿದ್ದ. ಶರೋನ್ ನ ಮರಣದಲ್ಲಿ ಗೆಳತಿಯಾಗಿದ್ದ ಗ್ರೀಷ್ಮಾಳನ್ನು ಅನುಮಾನಿಸಲಾಯಿತು. ಆರಂಭದಲ್ಲಿ ಇದೊಂದು ಸಹಜ ಸಾವು ಎಂಬುದು ತನಿಖಾ ತಂಡದ ಅಂದಾಜು. ಆದರೆ ನಂತರ ವಿಶೇಷ ತನಿಖಾ ತಂಡ ನಡೆಸಿದ ತನಿಖೆ ಮತ್ತು ವಿಚಾರಣೆಯ ನಂತರ ಗ್ರೀಷ್ಮಾ ಶರೋನ್‍ಗೆ ವಿಷ ನೀಡಿ ಕೊಂದಿದ್ದಳು ಎಂದು ತಿಳಿದುಬಂದಿದೆ.
ಸಂಬಂಧದಿಂದ ಹಿಂದೆ ಸರಿಯಲು ಸಿದ್ಧವಿಲ್ಲದ ಕಾರಣ ವಿಷ ನೀಡಲಾಯಿತು ಎಂದು ಗ್ರೀಷ್ಮಾ ಪೋಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಪ್ರಕರಣದಲ್ಲಿ ಅವಳ ತಾಯಿ ಮತ್ತು ಚಿಕ್ಕಪ್ಪ ನಿರ್ಮಲಾ ಕುಮಾರನ್ ಅವರ ತಪ್ಪಿತಸ್ಥರು ಎಂದು ಪೋಲೀಸರು ಘೋಷಿಸಿದ್ದರು. ಶರೋನ್‍ನನ್ನು ಕೊಂದ ಗ್ರಿಷ್ಮಾಳನ್ನು ರಕ್ಷಿಸಲು ಅವರು ಪ್ರಯತ್ನಿಸಿದರು ಎಂದು ಪತ್ತೆಯಾದ ನಂತರ ಅವರಿಬ್ಬರ ಮೇಲೆ ಆರೋಪ ಹೊರಿಸಲಾಯಿತು.