ಲಖನೌ: 2024ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಮುಸ್ಲಿಮರ ವಿಶ್ವಾಸಕ್ಕೆ ಪಾತ್ರವಾಗಲು ಮುಂದಾಗಿದ್ದು, ಈ ದೇಶವು ಎಲ್ಲರಂತೆ ಮುಸ್ಲಿಮರದ್ದೂ ಆಗಿದೆ ಎಂದು ಪ್ರತಿಪಾದಿಸಿದೆ.
ಲಖನೌ: 2024ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಮುಸ್ಲಿಮರ ವಿಶ್ವಾಸಕ್ಕೆ ಪಾತ್ರವಾಗಲು ಮುಂದಾಗಿದ್ದು, ಈ ದೇಶವು ಎಲ್ಲರಂತೆ ಮುಸ್ಲಿಮರದ್ದೂ ಆಗಿದೆ ಎಂದು ಪ್ರತಿಪಾದಿಸಿದೆ.
'ಮುಸ್ಲಿಮರೂ ನಮ್ಮವರೇ.
ಸಂಘದ ನಿಕಟ ಮೂಲಗಳ ಪ್ರಕಾರ, ಕೆಲವು ಪ್ರಮುಖ ಮುಸ್ಲಿಂ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಗೆ ಆಹ್ವಾನಿತರಾದವರಲ್ಲಿ, ತಮ್ಮ ತೋಟದಲ್ಲಿ ಹೊಸ ತಳಿಯ ಮಾವುಗಳನ್ನು ಬೆಳೆದು ಹಲವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾದ ಲಖನೌ ಮೂಲದ ಪ್ರಸಿದ್ಧ ಮಾವು ಬೆಳೆಗಾರ ಕಲೀಮುಲ್ಲಾ ಅವರೂ ಇದ್ದರು.
'ಆರ್‌ಎಸ್‌ಎಸ್ ಇಡೀ ಸಮಾಜವನ್ನು ಒಗ್ಗೂಡಿಸಲು ಬಯಸಿದೆ. ಸಂಘವನ್ನು ವಿರೋಧಿಸುವವರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು' ಎಂದು ಭಾಗವತ್ ಹೇಳಿದರು.
'ನಾವು ಬಾಂಗ್ಲಾದೇಶಕ್ಕೆ ಸಹಾಯ ಮಾಡಿದ ರೀತಿಯಲ್ಲೇ, ಪಾಕಿಸ್ತಾನವನ್ನು ವಿರೋಧಿಸುವ ದೇಶಗಳಿಗೆ ನಾವು ಸಹಾಯ ಹಸ್ತ ಚಾಚಬೇಕು' ಎಂದೂ ಅವರು ಹೇಳಿದರು.
ಇದೇ ವೇಳೆ, ಸನಾತನ ಧರ್ಮವನ್ನು ಟೀಕಿಸುವವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಹಿಂದೂ ಧರ್ಮವನ್ನು ಟೀಕಿಸುವವರಿಗೆ ವಾಸ್ತವವಾಗಿ ಅದರ ಬಗ್ಗೆ ತಿಳಿದಿಲ್ಲ. ಹಿಂದೂ ಧರ್ಮವನ್ನು ಟೀಕಿಸುವ ಜನರು ಅದರ ಬಗ್ಗೆ ತಿಳಿದ ನಂತರ ಅದನ್ನು ಮೆಚ್ಚಿದ ಹಲವು ಉದಾಹರಣೆಗಳಿವೆ ಎಂದು ಅವರು ಹೇಳಿದರು.