ಮುಳ್ಳೇರಿಯ: ಇರಿಯಣ್ಣಿಯ ಸÀರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಸ್‍ಪಿಸಿ, ಸ್ಕೌಟ್ ಮತ್ತು ಗೈಡ್ ಹಾಗೂ ಲಿಟಲ್ ಕೈಟ್ ಘಟಕಗಳ ಓಣಂ ರಜೆ ಶಿಬಿರಗಳು ಆರಂಭಗೊಂಡಿವೆ. ಪೋಕ್ಸೊ-ಸೈಬರ್ ಕಾನೂನುಗಳು, ಮಾದಕ ದ್ರವ್ಯ ಮುಕ್ತ ಸಮಾಜ ಮತ್ತು ಪ್ರಕೃತಿ ಸಂರಕ್ಷಣೆಯಂತಹ ವಿಷಯಗಳ ಕುರಿತು ತಜ್ಞರು ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೆರವಣಿಗೆ, ಕ್ಷೇತ್ರ ಭೇಟಿ, ಕ್ಯಾಂಪ್ ಫೈರ್ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಎಸ್‍ಪಿಸಿ ಜಿಲ್ಲಾ ಹೆಚ್ಚುವರಿ ನೋಡಲ್ ಅಧಿಕಾರಿ ಟಿ. ತಂಬಾನ್ ಧ್ವಜಾರೋಹಣಗೈದರು. ಲಿಟಲ್ ಕೈಟ್ ನ ಒಂದು ದಿನದ ಶಿಬಿರ, ಸ್ಕೌಟ್-ಗೈಡ್ ನ ಎರಡು ದಿನಗಳ ಒಡನಾಟ ಶಿಬಿರ, ಎಸ್ ಪಿಸಿಯ ಮೂರು ದಿನಗಳ ಶಿಬಿರಗಳನ್ನು ಕಾರಡ್ಕÀ ಬ್ಲಾಕ್ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಬಿ.ಎಂ. ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸಜೀವನ್ ಮದಪರಂಪತ್, ಸಬ್ ಇನ್ಸ್ ಪೆಕ್ಟರ್ ದಿವಾಕರನ್, ಸ್ಕೌಟ್ ಮತ್ತು ಗೈಡ್ ಜಿಲ್ಲಾಧಿಕಾರಿ ಪಿ. ಬಾಬು, ಪಿಟಿಎ ಉಪಾಧ್ಯಕ್ಷ ಬಾಬುರಾಜ್ ಮಂಚಕಲ್, ಐಟಿ ಸಂಯೋಜಕ ವಿ. ಎಂ.ಕೃಷ್ಣಪ್ರಸಾದ್, ಸಿಪಿಒ ಕೆ.ಸಿ.ಸಿಮಿಷಾ, ಎಸಿಪಿಒ ಎಂ.ಅಂಬಿಕಾ, ಡಿಐ ಬಾಲಕೃಷ್ಣನ್, ಟಿ.ವಿ.ಸಂಗೀತಾ, ಸಿ.ಸುರಸಿ, ಎಂ.ಕೆ.ಸರಿತಾ, ಕೆ. ಶಿಜಿತ್ ಮಾತನಾಡಿದರು. ಮುಖ್ಯಶಿಕ್ಷಕ ಎ.ಎಂ.ಅಬ್ದುಲ್ ಸಲಾಂ ಸ್ವಾಗತಿಸಿ, ಎಸ್‍ಆರ್‍ಜಿ ಸಂಚಾಲಕಿ ಕೆ. ನಿಮಿಷ ಬಾಬು ವಂದಿಸಿದರು.