ನಾಗಪುರ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಿದ ಬಾಂಗ್ಲಾದೇಶದ 15 ತಿಂಗಳ ಪುಟ್ಟ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದೆ.
ನಾಗಪುರ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸಿದ ಬಾಂಗ್ಲಾದೇಶದ 15 ತಿಂಗಳ ಪುಟ್ಟ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದೆ.
ಆ. 27ರಂದು ವಿಮಾನ ಹಾರಾಟ ನಡೆಸಿದ ಕೆಲ ಹೊತ್ತಿನ ನಂತರ ತೀವ್ರ ಆರೋಗ್ಯ ಸಮಸ್ಯೆಯಿಂದ ಮಗು ಬಳಲಿತ್ತು.
ವಿಮಾನ ಹಾರಾಟದ ಸಂದರ್ಭದಲ್ಲೇ ಮಗು ಪ್ರಜ್ಞೆ ಕಳೆದುಕೊಂಡಿತ್ತು. ಆಘಾತಗೊಂಡ ಪಾಲಕರು ನೆರವಿಗಾಗಿ ಮೊರೆ ಇಟ್ಟರು. ತಕ್ಷಣ ವಿಮಾನದ ಸಿಬ್ಬಂದಿ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದರು. ಹೀಗಾಗಿ ತಮ್ಮ ಪ್ರಯಾಣದ ದಿಕ್ಕನ್ನು ನಾಗಪುರದ ಕಡೆ ತಿರುಗಿಸಿದರು. ಪ್ರಯಾಣದ ಸಂದರ್ಭದಲ್ಲಿ ಸಹ ಪ್ರಯಾಣಿಕರು ಕೃತಕ ಉಸಿರಾಟ (ಸಿಪಿಆರ್) ನೀಡುವ ಪ್ರಯತ್ನ ನಡೆಸಿದರು. ಭೂಸ್ಪರ್ಶದ ನಂತರ ತ್ವರಿತವಾಗಿ ಮಗುವನ್ನು ಇಲ್ಲಿನ ಕಿಮ್ಸ್-ಕಿಂಗ್ಸ್‌ವೇ ಆಸ್ಪತ್ರೆಗೆ ದಾಖಲಿಸಲಾಯಿತು.
'ಆದರೆ ಮೂರು ದಿನಗಳ ಜೀವನ್ಮರಣದ ಹೋರಾಟ ನಡೆಸಿದ ಬಾಂಗ್ಲಾದೇಶದ ಮಗು ಗುರುವಾರ ಮಧ್ಯಾಹ್ನ ಕೊನೆಯುಸಿರೆಳೆದಿದೆ. ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಮಗು ಬಳಲುತ್ತಿತ್ತು. ಅಂತಿಮವಾಗಿ ಬಹು ಅಂಗಾಂಗ ವೈಫಲ್ಯದಿಂದ ಮಗು ಮೃತಪಟ್ಟಿದೆ. ಮೃತದೇಹವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಸಕಲ ಸಿದ್ಧತೆ ಮಾಡಲಾಗಿದೆ' ಎಂದು ವೈದ್ಯರು ತಿಳಿಸಿದ್ದಾರೆ.