ಮುಳ್ಳೇರಿಯ: ಮುಳ್ಳೇರಿಯ ರಸ್ತೆಯ ಪಿಲಾಂಕಟ್ಟೆ 2ನೇ ಮೈಲು ನಿವಾಸಿಗಳಿಗೆ ಬಸ್ಸುತಂಗುದಾಣವಿದ್ದರೂ ಉಪಯೋಗಕ್ಕಿಲ್ಲದಂತಾಗಿದೆ. ತಂಗುದಾಣದ ತುಂಬ ನೀರು ತುಂಬಿ ನಿಲ್ಲುತ್ತಿದ್ದು ಒಳಗೆ ನಿಂತುಕೊಳ್ಳಲು ಆಗುತ್ತಿಲ್ಲವೆಂದು ನಾಗರಿಕರು ದೂರಿದ್ದಾರೆ.
ಕುಂಬಳೆ ಮುಳ್ಳೇರಿಯ ರಸ್ತೆಯ ನೂತನ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಮುಗಿದಿದ್ದು ವಿವಿಧೆಡೆಗಳಲ್ಲಿ ನೂತನ ಬಸ್ಸು ತಂಗುದಾಣಗಳನ್ನು ನಿರ್ಮಿಸಲಾಗಿದೆ. ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ಹಳೆಯ ಕಾಂಕ್ರೀಟು ತಂಗುದಾಣಗಳನ್ನು ಮುರಿದು ತೆರವುಗೊಳಿಸಿ ಇದೀಗ ಹೊಸತಾಗಿ ತಂಗುದಾಣಗಳನ್ನು ನಿರ್ಮಿಸಲಾಗಿದ್ತೆ. ಆದರೆ ಪಿಲಾಂಕಟ್ಟೆ 2ನೇ ಮೈಲಿನಲ್ಲಿ ಕಾಂಕ್ರೀಟು ಕಟ್ಟಡವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಕಾಮಗಾರಿಯ ವೇಳೆ ರಸ್ತೆಯನ್ನು ಮಣ್ಣುಹಾಕಿ ಎತ್ತರಗೊಳಿಸಲಾಗಿತ್ತು. ಇದೀಗ ಬಸ್ಸು ತಂಗುದಾಣ ರಸ್ತೆಯಿಂದ ತಗ್ಗು ಪ್ರದೇಶದಲ್ಲಿದೆ. ಇದರಿಂದಾಗಿ ತಂಗುದಾಣದೊಳಗೆ ನೀರುತುಂಬಿ ನಿಲ್ಲುತ್ತದೆ ಎಂದು ಊರವರು ಹೇಳುತ್ತಿದ್ದಾರೆ. ಸಮೀಪದಲ್ಲಿ ಅಂಗನವಾಡಿ, ಶಾಲೆ ಇದೆ. ಪರಿಸರದ ನೂರಾರು ಮಂದಿ ದಿನನಿತ್ಯ ಈ ತಂಗುದಾಣವನ್ನು ಆಶ್ರಯಿಸುತ್ತಿದ್ದಾರೆ. ಇದೀಗ ನೀರು ತುಂಬಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ತಂಗುದಾಣದ ಹೊರಭಾಗದಲ್ಲಿ ರಸ್ತೆಯ ಬದಿಯಲ್ಲೇ ಕಾದುನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಈ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ನಾಗರಿಕರು ತಮ್ಮ ಅಹವಾಲನ್ನು ತೋಡಿಕೊಳ್ಳುತ್ತಿದ್ದಾರೆ.
ಅಭಿಮತ:
ಎಲ್ಲಾ ಕಡೆಗಳಲ್ಲೂ ನೂತನ ತಂಗುದಾಣವನ್ನು ನಿರ್ಮಿಸಲಾಗಿದ್ದರೂ, ಇಲ್ಲಿ ಹಳೆಯ ತಂಗುದಾಣವು ಹಾಗೇ ಇದೆ. ನಾಗರಿಕರಿಗೆ ಬಸ್ಸಿಗೆ ಕಾದು ನಿಲ್ಲಲು ಅಧಿಕಾರಿಗಳು ಅಗತ್ಯಕ್ರಮಕೈಗೊಳ್ಳಬೇಕಾಗಿದೆ. ಅನೇಕ ಕಡೆಗಳಲ್ಲಿ ಅದೆμÉ್ಟೂೀ ದಾರಿದೀಪಗಳನ್ನು ಅಳವಡಿಸಲಾಗಿದೆ. ಆದರೆ ಇಲ್ಲಿಗೆ ಬೆಳಕಿನ ವ್ಯವಸ್ಥೆಯನ್ನೂ ಮಾಡಬೇಕಾಗಿದೆ.
ಶಶಿಧರ ತೆಕ್ಕೆಮೂಲೆ, ಸಾಮಾಜಿಕ ಕಾರ್ಯಕರ್ತ