HEALTH TIPS

ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಪತ್ತೆ

              ವದೆಹಲಿ: ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

              ಈ ಹಿನ್ನೆಲೆಯಲ್ಲಿ ಕೇರಳ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಕೇಂದ್ರದಿಂದ ನಿಪಾ ವೈರಸ್‌ ನಿರ್ವಹಣಾ ತಂಡವನ್ನು ಕಳುಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ತಿಳಿಸಿದ್ದಾರೆ.

               ನಿನ್ನೆ (ಸೆ.11) ಕೋಯಿಕ್ಕೋಡ್‌ನ ಖಾಸಗಿ ಆಸ್ಪತೆಯಲ್ಲಿ ಇಬ್ಬರು ಅಸಹಜವಾಗಿ ಮೃತಪಟ್ಟಿರುವುದರ ಬಗ್ಗೆ ವರದಿಯಾದ ಬಳಿಕ ನಿಪಾ ವೈರಸ್‌ ಇರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಶಂಕಿತರ ಪರೀಕ್ಷೆಯ ವರದಿಯಲ್ಲಿ ನಿಪಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.

                ವರದಿಯ ಪ್ರಕಾರ ವೈರಸ್‌ನಿಂದ ಮೊದಲ ಸಾವು ಆಗಸ್ಟ್‌ 30 ರಂದು ಮತ್ತು ಎರಡನೇ ಸಾವು ಸೋಮವಾರ (ಸೆ.11)ರಂದು ಸಂಭವಿಸಿದೆ.

                   ಈಗಾಗಲೇ ಕೇರಳ ಸರ್ಕಾರ ಕೋಯಿಕ್ಕೋಡ್‌ನಲ್ಲಿ ಕಂಟ್ರೋಲ್‌ ರೂಮ್‌ನ್ನು ಸ್ಥಾಪಿಸಿದ್ದು, ಮುಂಜಾಗೃತಾ ಕ್ರಮವಾಗಿ ಜನರಿಗೆ ಮಾಸ್ಕ್‌ ಧರಿಸಲು ಸೂಚನೆ ನೀಡಲಾಗಿದೆ.

                   ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ಭಯಪಡುವ ಅಗತ್ಯವಿಲ್ಲ, ವೈರಸ್‌ನಿಂದ ಮೃತಪಟ್ಟವರ ಸಂಪರ್ಕದಲ್ಲಿದ್ದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ, ಜಾಗೃತರಾಗಿರಿ, ಆರೋಗ್ಯ ಇಲಾಖೆ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕರಿಸಿ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries