ಕಾಸರಗೋಡು: ಜಿಲ್ಲೆಯ ಹೊಸದುರ್ಗದಲ್ಲಿರುವ ಫಾಸ್ಟ್ ಟ್ರ್ಯಾಕ್ ಸ್ಪೆಶಲ್ ನ್ಯಾಯಾಲಯದಲ್ಲಿ ಕಂಪ್ಯೂಟರ್ ಅಸಿಸ್ಟೆಂಟ್ ಯಾ ಎಲ್.ಡಿ ಟೈಪಿಸ್ಟ್ (1), ಆಫೀಸ್ ಅಟೆಂಡೆಂಟ್ ಯಾ ಪ್ಯೂನ್ (2) ಎಂಬೀ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಅರ್ಹಮತ್ತು ಆಸಕ್ತಿಯಿರುವ ನ್ಯಾಯಾಲಯದ ನಿವೃತ್ತ ನೌಕರರಿಂದ ಹಾಗೂ ನಿವೃತ್ತ ಸರ್ಕಾರಿ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಯಸ್ಸು 62 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಪ್ರಸಕ್ತ ಹುದ್ದೆಗೆ ಸಮಾನವಾದ ಅಥವಾ ಇದಕ್ಕಿಂತ ಉನ್ನತ ಹುದ್ದೆಯಿಂದ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಾಗಿರಬೇಕು. ಅರ್ಹತೆ ಹೊಂದಿರುವ ಅಭ್ಯರ್ಥಿಯು ಅರ್ಜಿಯ ಜೊತೆಗೆ ವಯಸ್ಸು, ಅರ್ಹತೆ, ಕೆಲಸದ ಅನುಭವ ಮುಂತಾದವುಗಳನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ದೃಢೀಕರಿಸಿದ ಪ್ರತಿಗಳೊಂದಿಗೆ ನಿಗದಿತ ನಮೂನೆಯಲ್ಲಿರುವ ಅರ್ಜಿಗಳನ್ನು ಜಿಲ್ಲಾ ಜಡ್ಜ್ ಜಿಲ್ಲಾ ನ್ಯಾಯಾಲಯ, ಕಾಸರಗೋಡು 671123 ಎಂಬ ವಿಳಾಸಕ್ಕೆ ಸೆಪ್ಟೆಂಬರ್ 30ರೊಳಗೆ ನೇರವಾಗಿ ಅಥವಾ ಅಂಚೆ ಮೂಲಕ ಕಳುಹಿಸಬೇಕು. ನಿಗದಿತ ಸಮಯದ ನಂತರ ಪಡೆಯುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ (hಣಣಠಿs:ಜisಣಡಿiಛಿಣs.eಛಿouಡಿಣs.gov.iಟಿ/ಞಚಿsಚಿಡಿಚಿgoಜ)ಸಂದರ್ಶಿಸುವಂತೆ ಪ್ರಕಟಣೆ ತಿಳಿಸಿದೆ.