ಕೋಲ್ಕತ್ತ: ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ಪುತ್ರಿ ಸೈಮಾ ವಾಝೆದ್ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಲ್ಕತ್ತ: ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಜೊತೆಗೆ ಪುತ್ರಿ ಸೈಮಾ ವಾಝೆದ್ ಕೂಡ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂಡೊನೇಷ್ಯಾದಲ್ಲಿ ಈಚೆಗೆ ನಡೆದ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ರಾಷ್ಟ್ರಗಳ ಶೃಂಗಸಭೆಗೂ ಸೈಮಾ ಅವರು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಜೊತೆಗೆ ತೆರಳಿದ್ದರು.
ಇದರಿಂದ ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನಲ್ಲಿ ಸೈಮಾ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ತ್ರಿಪುರಾದ ಜೊತೆಗಿನ ರೈಲು ಸಂಪರ್ಕಕ್ಕೆ ಚಾಲನೆ ಹಾಗೂ ರಾಂಪಾಲ್ ವಿದ್ಯುತ್ ಸ್ಥಾವರದ ಎರಡನೇ ಘಟಕದ ಉದ್ಘಾಟನೆಯನ್ನು ಶೇಖ್ ಹಸೀನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೆರವೇರಿಸುವರು. ಅಲ್ಲದೆ ಭಾರತದ ಜೊತೆಗಿನ ಹಲವು ಒಪ್ಪಂದಗಳಿಗೂ ಸಹಿ ಹಾಕಲಿದ್ದಾರೆ ಎಂದಿವೆ.