ಕುಂಬಳೆ: ಇತಿಹಾಸ ಪ್ರಸಿದ್ದವೂ, ಕೋಮು ಸಾಮರಸ್ಯದ ಕೇಂದ್ರವಾಗಿಯೂ ಪ್ರಸಿದ್ದವಾಗಿರುವ ಆರಿಕ್ಕಾಡಿ ಶ್ರೀ ಭಗವತಿ ಅಲಿ ಚಾಮುಂಡಿ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ನಾಳೆ(ಸೆ. 24) ಬೆಳಗ್ಗೆ 11 ಕ್ಕೆ ದೈವಸ್ಥಾನದಲ್ಲಿ ಮನವಿ ಪತ್ರ ಬಿಡುಗಡೆ ನಡೆಯಲಿದೆ ಎಂದು ದೈವಕ್ಷೇತ್ರದ ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
. ಕಾರ್ಯಕ್ರಮದಲ್ಲಿ ಮಲಬಾರ್ ದೇವಸ್ವಂ ಮಂಡಳಿ ಅಧ್ಯಕ್ಷ ಎಂ.ಆರ್.ಮುರಳಿ ಭಾಗವಹಿಸಲಿದ್ದಾರೆ. ಬ್ರಹ್ಮಶ್ರೀ ಕರ್ಕುಳ ಬೀಡು ಶಂಕರ ನಾರಾಯಣ ಕಡಮಣ್ಣಾಯ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರಧಾನ ಧರ್ಮದರ್ಶಿಯಾಗಿ ವಿಸ್ತೃತ ಸಮಿತಿ ರಚಿಸಲಾಗಿದೆ. ಶ್ರೀಕ್ಷೇತ್ರ ಮೂಲಾಲಯ, ಚುಟುಕು ಗೋಪುರಗಳು, ಭಂಡಾರ ಮನೆ, ನಾಗಸನ್ನಿಧಿ, ಆಲಿಚಾಮುಂಡಿ ದೈವದ ಅಭಯಸ್ಥಾನ, ಗುಳಿಕನÀ ಕಟ್ಟೆ ಗಳನ್ನು 4 ಕೋಟಿ ರೂ.ಗಳ ನವೀಕರಣ ಕಾಮಗಾರಿ ನಡೆಯಲಿದೆ. ಐತಿಹಾಸಿಕ ಕುಂಬಳ ಸೀಮೆಯಲ್ಲಿರುವ ಭಗವತಿ ಅಲಿ ಚಾಮುಂಡಿ ದೇವಸ್ಥಾನವು ತೀಯ ಸಮುದಾಯದ 18 ದೇವಾಲಯಗಳಲ್ಲಿ ಒಂದಾಗಿದೆ. 1800 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಪತ್ತಾರ ಕುಳಂಗರ ಭಗವತಿ, ನೂತನ ಭಗವತಿ, ವೀರಕಾಳಿ, ವೀರಪುತ್ರನ್, ಮಲಯ ಚಾಮುಂಡಿ ಪ್ರಮುಖ ದೇವತೆಗಳಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಹೆಸರಾದ ಆಲಿ ಚಾಮುಂಡಿಯ ಆಶೀರ್ವಾದ ಪಡೆಯಲು ಮುಸ್ಲಿಂ ಸಮುದಾಯಗಳ ಸಹಿತ ಸರ್ವ ಧರ್ಮದವರೂ ಆಗಮಿಸುತ್ತಾರೆ. ಆಲಿ ದೈವ, ಪತ್ತಾರ ಕುಳಂಗರ ಭಗವತಿ, ಮಂತ್ರಮೂರ್ತಿ, ಕಲಶ ಪ್ರದಕ್ಷಿಣೆಯೊಂದಿಗೆ ಹೂಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸುತ್ತಾರೆ.
ದೈವಕ್ಷೇತ್ರದ ಅಧ್ಯಕ್ಷ ಸುಕುಮಾರ್ ಎಂ.ಕುಂಬಳೆ, ಪದಾಧಿಕಾರಿಗಳಾದ ಅಶೋಕ ಎಂ.ಬಂಬ್ರಾಣ, ಟಿ.ಎಂ.ಸತ್ಯನಾರಾಯಣ, ಜಿ.ಸದಾಶಿವ, ಎಂ.ಕರುಣಾಕರ, ಕೆ.ಸಂತೋಷ್ ಕುಮಾರ್, ಬಿ. ಕೃಷ್ಣನ್ ಮಾಸ್ತರ್, ಸಜಿತ್ ಮತ್ತು ಸೌಮ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.