ಬದಿಯಡ್ಕ: ರೋಟರಿ ಬದಿಯಡ್ಕ ಸದಸ್ಯರು ಹಾಗೂ ಸಹವರ್ತಿಗಳು ಶಾಲಾ ಮಕ್ಕಳಿಗಾಗಿ ತಯಾರಿಸಿದ ಹಿತ ನುಡಿಗಳನ್ನಾದರಿಸಿದ ಗೋಡೆಬರಹ ಚಿತ್ರಗಳ ಅನಾವರಣ ಕಾರ್ಯಕ್ರಮ ಶುಕ್ರವಾರ ನಡೆಯಿತು. ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮಿನಿ ಮಾತನಾಡಿ ಸಾಮಾಜಿಕ ಚಿಂತನೆಗಳೊಂದಿಗೆ ಸಂಘಟನೆಯೊಂದು ಮುಂದುವರಿಯುತ್ತಿರುವುದು ಶ್ಲಾಘನೀಯವಾಗಿದೆ. ಇಂದಿನ ಮಕ್ಕಳು ನಾಳೆ ಹೇಗಿರಬೇಕು ಎಂಬ ಚಿಂತನೆ ಎಲ್ಲರಲ್ಲೂ ಮೂಡಿಬರಬೇಕು ಎಂದರು. ರೋಟರಿ ಬದಿಯಡ್ಕದ ಅಧ್ಯಕ್ಷ ರಾಧಾಕೃಷ್ಣ ಪೈ, ಕಾರ್ಯದರ್ಶಿ ವೈ.ರಾಘವೇಂದ್ರ ಪ್ರಸಾದ್, ಕೋಶಾಧಿಕಾರಿ ಕೇಶವ, ರೋಟರಿ ಸದಸ್ಯರು, ಶಾಲಾ ಅಧ್ಯಾಪಕರು, ಸ್ಟೂಡೆಂಟ್ ಪೊಲೀಸ್ ಕೆಡೆಟ್ ಪಾಲ್ಗೊಂಡಿದ್ದರು.