ಕಾಸರಗೋಡು : ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಸ್ವಯಂಸೇವಕರ ವತಿಯಿಂದ ಸೀತಾಂಗೋಳಿಯಲ್ಲಿ ಆಲದಮರವೊಂದನ್ನು ಸುಸಜ್ಜಿತ ಕಟ್ಟೆ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿದೆ.
ಗ್ರಾಮದ ನೆರಳು ಉಳಿಸುವ ಯೋಜನೆಯನ್ವಯ ಕಾಸರಗೋಡು ಸರ್ಕಾರಿ ಕಾಲೇಜಿನ ಎನ್‍ಎಸ್‍ಎಸ್ ಘಟಕ ಸೀತಾಂಗೋಳಿಯ ಹಳೇ ಆಲದ ಮರದ ಸುತ್ತು ನೂರಕ್ಕೂ ಹೆಚ್ಚು ಕೆಂಪುಕಲ್ಲುಗಳನ್ನು ಕಟ್ಟಿ ಮಣ್ಣು ತುಂಬುವ ಮೂಲಕ ಹೊಸಜೀವ ನೀಡಿದ್ದಾರೆ.
ಹಿರಿಯ ವಕೀಲ, ನಿವೃತ್ತ ಪಬ್ಲಿಕ್ ಪ್ರೋಸಿಕ್ಯೂಟರ್ ಥಾಮಸ್ ಡಿಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಕ, ಪಕ್ಷಿ ವೀಕ್ಷಕ ರಾಜು ಕಿದೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂತೋಷ್ ಆಟ್ರ್ಸ್ ಏಂಡ್ ಸ್ಪೋಟ್ರ್ಸ್ ಕ್ಲಬ್ ಸದಸ್ಯರು ಸಹಕಾರ ನೀಡಿದರು. ಕಾಸರಗೋಡು ಸರ್ಕಾರಿ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಆಶಾಲತಾ ಚೇವಾರ್, ಆಸಿಫ್ ಕಾಕ್ಕಶೇರಿ, ಮತ್ತು ಎನ್ನೆಸ್ಸೆಸ್ ಕಾರ್ಯದರ್ಶಿ ಸಾತ್ವಿಕ್ ಚಂದ್ರನ್.ಪಿ, ಅಭಿಜಿತ್. ಎ, ರಾಹುಲ್ ರಾಜ್, ಸ್ಮಿತಾ, ಸೃಷ್ಟಿ. ಬಿ, ರೇವತಿ.ಪಿ ಮತ್ತು ಮಹಿರಾ ಬೇಗಂ ನೇತೃತ್ವ ನೀಡಿದ್ದರು.