HEALTH TIPS

ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

               ಬದಿಯಡ್ಕ: ಅಗಲ್ಪಾಡಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳು ಜರಗಿತು. ಬೆಳಗ್ಗೆ ಸ್ಮøತಿಲಯ ಸಂಗೀತ ವಿದ್ಯಾಲಯ ಜಯನಗರ ಇವರಿಂದ ಸಂಗೀತಾರ್ಚನೆ, ಪೆರ್ಲ ಅಗಲ್ಪಾಡಿ ಘಟಕದ ಸದಸ್ಯರಿಂದ ಗೀತಾಜ್ಞಾನ ಯಜ್ಞ, ಮಕ್ಕಳಿಗೆ ಮತ್ತು ಹಿರಿಯರಿಗೆ ವಿವಿಧ ಸ್ಪರ್ಧೆಗಳು, ಬಹುಮಾನ ವಿತರಣೆ, ಮಹಾಪೂಜೆ, ಭೋಜನ ಪ್ರಸಾದ ವಿತರಣೆ ನಡೆಯಿತು. ಅಪರಾಹ್ನ ಕೃಷ್ಣ ರಾಧೆಯರ ವೇಷದೊಂದಿಗೆ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವರ ಸನ್ನಿಧಿಯಿಂದ ವೈಭÀವದ ಮೆರವಣಿಗೆ ನಡೆಯಿತು. ಅಗಲ್ಪಾಡಿ ಪಾಂಚಜನ್ಯ ತಂಡದಿಂದ ಕುಣಿತ ಭಜನೆ ಘೋಷಯಾತ್ರೆಯಲ್ಲಿ ಗಮನಸೆಳೆಯಿತು. ಅಗಲ್ಪಾಡಿ ಶ್ರೀಗೋಪಾಲಕೃಷ್ಣ ಭಜನಾ ಸಂಘ, ಶ್ರೀ ದುರ್ಗಾ ಭಜನಾ ಸಂಘ ಅಗಲ್ಪಾಡಿ ಮತ್ತು ಶ್ರೀಧರ್ಮಶಾಸ್ತಾ ಭಜನಾ ಸಂಘ ಉಬ್ರಂಗಳ ಇವರು ಭಜನೆ ನಡೆಸಿಕೊಟ್ಟರು.

                    ಧಾರ್ಮಿಕ ಸಭೆ : 

               ಸೋಲನ್ನೇ ಸವಾಲಾಗಿ ಸ್ವೀಕರಿಸುವ ಮನೋಭಾವವಿರಬೇಕು : ಕಿರುತೆರೆ ನಟಿ ಆದಿರಾ ಲಕ್ಷ್ಮಣ್

                ಅಪರಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಪ್ರಸಿದ್ದ ಕಿರುತೆರೆ ನಟಿ, ನೃತ್ಯಪಟು, ಏಶಿಯಾನೆಟ್ ಚಾನೆಲ್‍ನ  ಪ್ರಸಿದ್ಧ ಧಾರವಾಹಿ "ಗೀತಾ ಗೋವಿಂದಮ್"ನಲ್ಲಿ ನೆಗೆಟಿವ್ ರೋಲ್ "ಸುವರ್ಣಧಳ  ಪಾತ್ರದಲ್ಲಿ ಪ್ರಬುದ್ದ ನಟನಾ ಕೌಶಲ್ಯತೆ ಮೆರೆದು ಮನೆ ಮಾತಾಗಿರುವ ನಟಿ ಆದಿರಾ ಲಕ್ಷ್ಮಣ್ ಪಾಲ್ಗೊಂಡಿದ್ದರು. ಅವರು ದೀಪಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಜೀವನದಲ್ಲಿ ಅದೆಷ್ಟೋ ಬಾರಿ ನಾವು ಸೋಲುತ್ತೇವೆ. ಆದರೆ ಸೋತೆ ಎಂದು ಹಿಂದೆ ತಿರುಗಿ ನೋಡುವುದರ ಬದಲು ಅದನ್ನೇ ಸವಾಲಾಗಿ ಸ್ವೀಕರಿಸಿ ಮುನ್ನಡೆದಾಗ ಗೆಲುವು ನಮ್ಮದಾಗುತ್ತದೆ. ಎಳವೆಯಲ್ಲಿಯೇ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ಅವರ ಜೀವನಕ್ಕೆ ದಾರಿದೀಪವಾಗುತ್ತದೆ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಕೀರ್ತಿಯನ್ನು ಗಳಿಸುವುದರಲ್ಲಿ ಸಂದೇಹವಿಲ್ಲ. ಸಂಗೀತ ಭರತನಾಟ್ಯ ಮುಂತಾದ ಕಲಾಪರ ಚಟುವಟಿಕೆಗಳು ಇಲ್ಲಿ ನಿರಂತರ ನಡೆಯುತ್ತಿರುವುದು ಇಲ್ಲಿನ ಮಕ್ಕಳ ಭಾಗ್ಯ ಎಂದರು. 

             ಬ್ರಹ್ಮಶ್ರೀ ಉಳಿಯತ್ತಾಯ ನಾರಾಯಣ ಅಸ್ರ ತಂತ್ರಿಗಳು ಧಾರ್ಮಿಕ ಭಾಷಣ ಮಾಡಿದರು. ಕೃಷ್ಣಾಷ್ಟಮಿಯನ್ನು ದೇಶದೆಲ್ಲೆಡೆ ಆಚರಿಸುತ್ತಾರೆ. ಮಕ್ಕಳ ಮೂಲಕ ಕೃಷ್ಣನನ್ನು ಕಂಡು ಸಂಭ್ರಮಿಸುವ ದಿನವಿದಾಗಿದೆ. ನಮ್ಮ ಪ್ರತಿಯೊಂದು ಆಚರಣೆಗಳಿಗೂ ವಿಶೇಷ ಮಹತ್ವವಿದೆ. ನಮ್ಮ ಧರ್ಮ, ಸಂಸ್ಕಾರ, ಆಚರಣೆಗಳು ಉಳಿಯುವಲ್ಲಿ ಇಂತಹ ಹಬ್ಬಗಳೇ ಕಾರಣ. ತನ್ಮೂಲಕ ಇಡೀ ಸಮಾಜವೇ ಒಂದಾಗಿ ಧರ್ಮಜಾಗೃತಿಯ ಭಾವನೆಯನ್ನು ಜನರಲ್ಲಿ ಮೂಡಿಸುತ್ತದೆ ಎಂದರು. ಹಿರಿಯರಾದ ಪ್ರೊ.ಎ.ಶ್ರೀನಾಥ್, ಸುಧಾಮ ಪದ್ಮಾರು, ವಸಂತಿ ಟೀಚರ್, ಜನಾರ್ದನ ಮಣಿಯಾಣಿ, ಬಾಬು ಮಣಿಯಾಣಿ ಜಯನಗರ ಉಪಸ್ಥಿತರಿದ್ದರು. ಇದೇ ಸಂದಭರ್À 2022-23 ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳಾದ ಸ್ನೇಹಾ ಕೆ, ನವೀನ್ ಕುಮಾರ್ ಮತ್ತು ಪ್ರಜ್ವಲ್ ಎಂ ಎಲ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದಿ. ಸತ್ಯನಾರಾಯಣ ಬದಿಯಡ್ಕ ಇವರ ಸ್ಮರಣಾರ್ಥ ನೀಡುವ ಧನ ಸಹಾಯವನ್ನು ಕುಮಾರಿ ವೈಷ್ಣವಿ ಆರ್ ಇವರಿಗೆ ನೀಡಲಾಯಿತು. ಮಂಗಳೂರಿನ ಮಧು ಸಮೂಹ ಸಂಸ್ಥೆಯ ಮಾಲಕ ಮಧುಸೂದನ್ ಆಯರ್ ಕೊಡಮಾಡುವ ಧನ ಸಹಾಯವನ್ನು ವೇದಾಂತ್ ಆರ್ ಪಿ ಇವರಿಗೆ ನೀಡಲಾಯಿತು. ರಮೇಶ್‍ಕೃಷ್ಣ ಪದ್ಮಾರು ಸ್ವಾಗತಿಸಿ, ಚಂದ್ರಶೇಖರ ಮಾಸ್ತರ್ ನಾರಂಪಾಡಿ ವಂದಿಸಿದರು. ಪಾಂಚಜನ್ಯ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ರಾಜೇಶ್ ಮಾಸ್ತರ್ ಆಗಲ್ಪಾಡಿ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries