ಕಾಸರಗೋಡು: ಕೃಷ್ಣನ ಸಂದೇಶವನ್ನು ಮಕ್ಕಳಿಗೆ ದಾಟಿಸುವ ಮೂಲಕ ಸನಾತನ ಧರ್ಮವನ್ನು ಉಳಿಸಿ ಬೆಳೆಸಬಹುದು. ಧರ್ಮವನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸುವಂತಹ ಶ್ರೀಕೃಷ್ಣನಂತಹ ಮಕ್ಕಳು ಸಮಾಜದಲ್ಲಿ ಬೆಳೆದು ಬರಬೇಕು. ಆ ಮೂಲಕ ಭಾರತೀಯ ಸಂಸ್ಕøತಿ, ಸಂಸ್ಕಾರವನ್ನು ದಾಟಿಸಿ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸಬಹುದು ಎಂದು ಸಂಸ್ಕøತ ಭಾರತೀ ಕಾಸರಗೋಡು ಜಿಲ್ಲಾ ಸಂಯೋಜಕರಾದ ಎಸ್.ಎಂ.ಉಡುಪ ಹೇಳಿದರು.
ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು 12 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ದೀಪ ಪ್ರಜ್ವಲನಗೈದು ಚಾಲನೆ ನೀಡಿ ಮಾತನಾಡಿದರು.
ಅಷ್ಟಮಿ ಸಮಿತಿ ಅಧ್ಯಕ್ಷ ದಿವಾಕರ ಅಶೋಕನಗರ ಅಧ್ಯಕ್ಷತೆ ವಹಿಸಿದರು. ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ, ಭರತನಾಟ್ಯ ಕಲಾವಿದೆ ಸೌಮ್ಯ ಶ್ರೀಕಾಂತ್, ಕಾಸರಗೋಡು ನಗರಸಭಾ ಕೌನ್ಸಿಲರ್ ಶ್ರೀಲತಾ, ನಿರ್ಮಲಾ ಶ್ರೀಕಾಂತ್, ಅನಿಲ್‍ರಾಜ್ ನಾಗರಕಟ್ಟೆ, ಕುಶಲ ಪಾರೆಕಟ್ಟೆ, ಯೋಗೀಶ್ ಕೋಟೆಕಣಿ, ರಾಮದಾಸ್, ಮಾಲಿಂಗ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಲತಾ ಪ್ರಕಾಶ್, ಕಾವ್ಯ ಕುಶಲ, ಅಶ್ವಿನಿ ಗುರುಪ್ರಸಾದ್ ನಿರೂಪಿಸಿದರು.
ಬೆಳಗ್ಗೆ ಶ್ರೀ ಭಿಕ್ಷು ಲಕ್ಷ್ಮಣಾನಂದ ಸರಸ್ವತಿ `Àಜನಾ ಸಂಘ ಅಣಂಗೂರು ಮತ್ತು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ಮಹಿಳಾ ಭಜನಾ ಸಂಘ ಕೊರಕ್ಕೋಡು ಅವರಿಂದ ಸಂಕೀರ್ತನೆ ನಡೆಯಿತು. ಆ ಬಳಿಕ ಶ್ರೀ ಕೃಷ್ಣ ವೇಷ ಸ್ಪರ್ಧೆ, ಸಭಾ ಕಾರ್ಯಕ್ರಮ ಹಾಗು ಬಹುಮಾನ ವಿತರಣೆ ನಡೆಯಿತು. ಇದೇ ವೇಳೆ ಮೊಸರು ಕುಡಿಕೆ ಸ್ಪಧೆರ್É ಜರಗಿತು.