ಮಂಜೇಶ್ವರ: ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರ, ಬ್ರಹ್ಮಶ್ರೀ ನಾರಾಯಣಗುರುಗಳು ಶೋಷಿತರು ಮತ್ತು ಹಿಂದುಳಿದವರ ಶ್ರೆಯೋಭಿವೃದ್ಧಿಗೆ ನಡೆಸಿರುವ ಹೋರಾಟ ಅವಿಸ್ಮರಣೀಯವಾದುದು ಎಂದು ಪುತ್ತೂರಿನ ಅಕ್ಷಯ ವಿದ್ಯಾ ಸಂಸ್ಥೆ ಅಧ್ಯಕ್ಷ, ಬಿಲ್ಲವ ಮುಖಂಡ ಜಯಂತ್ ನಡಿಬೈಲು ತಿಳಿಸಿದ್ದಾರೆ.
ಅವರು ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಕಾಸರಗೋಡು ಜಿಲ್ಲಾ ಸಮಿತಿ ಮಂಜೇಶ್ವರ ಇದರ ವತಿಯಿಂದ ತಲಪಾಡಿ ಮರಿಯಾಶ್ರಮ ಇಗರ್ಜಿ ಸಭಾಂಗಣದಲ್ಲಿ ಭಾನುವರ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 169 ನೇ ಜನ್ಮ ದಿನಾಚರಣೆ ಮತ್ತು ವೇದಿಕೆಯ 15 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಕಂಕನಾಡಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಗಂಗಾಧರ ಶಾಂತಿ ದೀಪ ಬೆಳಗಿಸಿ, ಉದ್ಘಾಟಿಸಿದರು. ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೃಷ್ಣ ಶಿವ ಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು.
ರಮೇಶ್ ಸಂತಡ್ಕ ಗುರು ಪೂಜೆ ನೆರವೇರಿಸಿದರು. ಈ ಸಂದರ್ಭ ಮಂಗಳೂರು ಉಳ್ಳಾಲದ ಧಾರ್ಮಿಕ, ಸಾಮಾಜಿಕ ಮುಖಂಡ ಕೆ.ಟಿ. ಸುವರ್ಣ ಇವರಿಗೆ "ಗುರುಶ್ರೀ "ಕಾಸರಗೋಡು ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ಲಸ್ ಟು, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ "ಗುರುಶ್ರೀ "ಬಂಗಾರದ ಪದಕ ಹಾಗೂ ಬೆಳ್ಳಿ ಪದಕ ಅಲ್ಲದೆ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಎಸ್ಸೆಸೆಲ್ಸಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ, ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ತರಂಜನ್ ಬೋಳಾರ್, ಎ.ಜೆ ಶೇಖರ್, ಕಾಸರಗೋಡು ಬಿಲ್ಲವ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಲ, ಸತೀಶ್ ಕುಂಪಲ, ಚಂದ್ರಶೇಖರ್ ಉಚ್ಚಿಲ ಬಾಬು ಶ್ರೀಶಾಸ್ತ ಕಿನ್ಯ, ರಘು.ಸಿ ಚೇರುಗೋಳಿ, ನಾರಾಯಣ ಪೂಜಾರಿ, ಹರೀಶ್ ಮುಂಡೋಳಿ, ಅಶ್ವಥ್ ಪೂಜಾರಿ ಚಿಪ್ಪಾರ್, ಉದ್ಯಮಿ ಸತೀಶ್ ಕರ್ಕೇರ, ತಿಲಕ್ ಪ್ರಸಾದ್, ಸತೀಶ್ ಕುಂಬಳೆ, ಲವ ಪೂಜಾರಿ ಮೀಪುಗುರಿ ಕಾಸರಗೋಡು, ದಿನೇಶ್ ಅತ್ತಾವರ, ಗುರು ಪ್ರಸಾದ್ ಶಾಂತಿ, ಜೀವನ್ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದು, ಕು. ಅನನ್ಯ, ಕು. ಲಿಖಿತ ಪ್ರಾರ್ಥನೆ ಹಾಡಿದರು. ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.