ಕಾಸರಗೋಡು: ಜಿಲ್ಲೆಯ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಮೌಲ್ಯಮಾಪನದ ಅಂಗವಾಗಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಕುತ್ತಿಕ್ಕೋಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು. ಪಂಚಾಯಿತಿ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಅಭಿವೃದ್ಧಿ ಹಾಗೂ ವಿವಿಧ ಕಲ್ಯಾಣ ಕಾರ್ಯಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಚಿತಾಗಾರಕ್ಕೆ ಭೂಮಿ, ಕುತ್ತಿಕ್ಕೋಲ್ ಪೇಟೆಯಲ್ಲಿ ಬಸ್‍ನಿಲ್ದಾಣಕ್ಕೆ ಜಮೀನು, ಮೆಕ್ಕಾಡಂ ರಸ್ತೆ ನಿರ್ಮಾಣದ ವೇಳೆ ಬದಲಾಯಿಸಿದ್ದ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಮರುಸ್ಥಾಪಿಸದಿರುವುದು, ಎಸ್ ಟಿ ವರ್ಗದ ಜಾತಿ ಪ್ರಮಾಣ ಪತ್ರ ವಿತರಣೆ, ನಿವೇಶನ ಹಕ್ಕುಪತ್ರ ನೀಡದಿರುವುದು. ಕಾಲನಿಗಳಿಗೆ ಕುಡಿಯುವ ನೀರು, ರಸ್ತೆ ಸೌಕರ್ಯದ ಕೊರತೆ, ಪಂಚಾಯಿತಿ ಕಚೇರಿ ಹಾಗೂ ವಿವಿಧ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ, ತವನತ್ತ್ ಜಿಎಲ್‍ಪಿ ಶಾಲೆಗೆ ಕಟ್ಟಡ, ಬಂದಡ್ಕ ಪಿಎಚ್‍ಸಿ ಕಟ್ಟಡ ನಿರ್ಮಣ, ಕಾಡುಪ್ರಾಣಿಗಳ ದಾಳಿ ತಡೆಗೆ ಕ್ರಮ, ಹಣ ಜಮಾ ಮಾಡಿದರೂ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸದಿರುವುದು, ಮಕ್ಕಳ ಪ್ರಯಾಣ ವಿಚಾರದಲ್ಲಿ ಗೋತ್ರಸಾರಥಿ ವಿದ್ಯಾವಾಹಿನಿ ಏಕೀಕರಣದ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಯಿತು.
ಗ್ರಾ.ಪಂ.ಅಧ್ಯಕ್ಷ ಮುರಳಿ ಪಯ್ಯಂಗಾನಂ, ಉಪಾಧ್ಯಕ್ಷ ಕೆ. ಶೋಭಾಕುಮಾರಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಕೆ ಅರವಿಂದನ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಪಿ.ಜೆ.ಲಿಸಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶಮೀರ್ ಕುಂಬಕೋಟ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ಕೃಷ್ಣನ್, ಶಾಂತಾ ಪಯ್ಯಂಗಾನಂ, ಶೀಬಾ ಸಂತೋಷ್. ಆಲಿಸ್ ಜಾರ್ಜ್, ಕೆ. ನಾರಾಯಣಿ, ಕೆ. ಕುಂಜಿರಾಮನ್ ಮತ್ತು ಬಲರಾಮನ್ ನಂಬಿಯಾರ್. ಅಶ್ವತಿ ಅಜಿತ್, ಪಿ ಮಾಧವನ್, ಸಹಾಯಕ ಕಾರ್ಯದರ್ಶಿ ಜಿ. ಜಯಕೃಷ್ಣನ್ ಪಿಇಓಸಿ ಗಣೇಶನ್, ಕೃಷಿ ಅಧಿಕಾರಿ ವಿನೋದಿನಿ, ಚಂದ್ರಲೇಖಾ, ಪಶು ವೈದ್ಯಾಧಿಕಾರಿ ಜಯಕೃಷ್ಣನ್, ವಿಇಒ ಸುನಿತಾ, ಎಂಜಿಎನ್‍ಆರ್‍ಇಜಿಎ ಐಇ ದೀಪಾ, ಐಸಿಡಿಎಸ್ ಸಿಡಿಪಿ ಓ ರಜನಿ ಉಪಸ್ಥಿತರಿದ್ದರು.