HEALTH TIPS

ಹದಿಹರೆಯದ ಮಗ/ಮಗಳಲ್ಲಿ ಈ ಖಿನ್ನತೆಯ ಲಕ್ಷಣ ಕಂಡು ಬಂದರೆ ಜಾಗ್ರತೆ

 ಮಕ್ಕಳು ಹದಿಹರೆಯುವ ಪ್ರಾಯಕ್ಕೆ ಬಂದರೆ ಅವರನ್ನು ನಿಭಾಯಿಸುವುದು ಪೋಷಕರಿಗೆ ಸುಲಭವಲ್ಲ, ಈ ಪ್ರಾಯದಲ್ಲಿ ತುಂಬಾನೇ ಜಾಗ್ರತೆಯಿಂದ ಅವರನ್ನು ನೋಡಿಕೊಳ್ಳಬೇಕು. ಹಾರ್ಮೋನ್‌ಗಳು ಬದಲಾಗುವ ಸಮಯ ಈ ಪ್ರಾಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುವುದಿಲ್ಲ. ಮಕ್ಕಳು ಹದಿಹೆಯದ ಪ್ರಾಯಕ್ಕೆ ಬಂದಾಗ ಅವರ ಸ್ವಭಾವದಲ್ಲಿ ಬದಲಾವಣೆಗಳು ಕಂಡು ಬರುವುದು.

ಕೆಲವೊಮ್ಮೆ ಮಕ್ಕಳು ಏಕೋ ತುಂಬಾ ಸಪ್ಪಗೆ ಇದ್ದಂತೆ ಕಾಣುತ್ತಾರೆ, ಲವಲವಿಕೆಯಿಂದ ಇದ್ದ ಮಗ/ಮಗಳು ತಾನಾಯ್ತು, ತನ್ನ ಪಾಡಾಯ್ತು ಎಂಬಂತೆ ಬದಲಾಗುತ್ತಾರೆ. ಅದು ಬೇಸರವೇ ಅಥವಾ ಅವರಿಗೆ ಖಿನ್ನತೆ ಕಾಡುತ್ತಿದೆಯೇ ಎಂಬುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಹದಿಹರೆಯದ ಪ್ರಾಯದವರಲ್ಲಿ ಕಂಡು ಬರುವ ಖಿನ್ನತೆಯ ಲಕ್ಷಣಗಳೇನು?

ಬೇಸರದಿಂದ ಇರುವುದು: ಮನುಷ್ಯವೆಂದ ಮೇಲೆ ಬೇಸರು, ಖುಷಿ ಎಲ್ಲಾ ಇರುತ್ತದೆ, ಆರೆ ಸದಾ ಬೇಸರವಾಗಿರುತ್ತಾರೆ ಅದನ್ನು ನಿರ್ಲಕ್ಷ್ಯ ಮಾಡಲೇಬೇಡಿ, ಅವರ ಮನಸ್ಸು ಅರಿಯಲು ಪ್ರಯತ್ನಿಸಿ.

ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು: ಹದಿಹರೆಯುವ ಪ್ರಾಯವೆಂದರೆ ಹೇಗಿರುತ್ತೆ? ತುಂಬಾನೇ ಲವಲವಿಕೆಯಿಂದ ಕೂಡಿರುತ್ತಾರೆ. ಅಂಥ ಪ್ರಾಯದಲ್ಲಿ ಯಾವುದಕ್ಕೂ ಆಸಕ್ತಿ ತೋರಿಸುತ್ತಿಲ್ಲ ಎಂದು ಅದು ಒಳ್ಳೆಯ ಲಕ್ಷಣವಲ್ಲ.
ನಿದ್ದೆಯಲ್ಲ ಬದಲಾವಣೆ: ಮಕ್ಕಳ ನಿದ್ದೆಯಲ್ಲಿ ತುಂಬಾನೇ ವ್ಯತ್ಯಾಸ ಕಂಡು ಬರುವುದು, ಮಕ್ಕಳಿಗೆ ನಿದ್ದೆ ಸರಿಯಾಗಿ ಬಾರದೇ ಇರುವುದು ಅಥವಾ ತುಂಬಾನೇ ನಿದ್ದೆ ಇವೆಲ್ಲಾ ಒಳ್ಳೆಯ ಲಕ್ಷಣವಲ್ಲ.
ಕಿರಿಕಿರಿ: ಚಿಕ್ಕ-ಪುಟ್ಟ ವಿಷಯಕ್ಕೆ ಕೋಪಗೊಳ್ಳುವುದು, ಅಳುವುದು
ಹಸಿವು ಇಲ್ಲದಿರುವುದು: ತುಂಬಾ ಸುಸ್ತು,ನಿಶ್ಯಕ್ತಿ, ತಲೆಸುತ್ತು
ಯಾರ ಜೊತೆ ಬೆರೆಯದೇ ಇರುವುದು: ನಿಮ್ಮ ಮಗ ಮತ್ತು ಮಗಳು ಯಾರ ಜೊತೆ ಬೆರೆಯುತ್ತಿಲ್ಲ, ಇತ್ತೀಚೆಗೆ ತುಂಬಾ ಒಂಟಿಯಾಗಿರುತ್ತಾರೆ ಎಂದಾದರೆ ಅವರ ಕಡೆಗೆ ಗಮನಹರಿಸಿ.
ಕಲಿಕೆ ಕಡೆ ಗಮನ ನೀಡಲು ಸಾಧ್ಯವಾಗದಿರುವುದು: ಮಗ ಅಥವಾ ಮಗಳಿಗೆ ಕಲಿಕೆ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಚೆನ್ನಾಗಿ ಓದುತ್ತಿರುವ ಮಕ್ಕಳು ಇತ್ತೀಚೆಗೆ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಅವರ ಕಡೆ ಗಮನಹರಿಸಬೇಕಾಗಿದೆ.
ಅವರಿಗೆ ಅವರೇ ತೊಂದರೆ ಮಾಡಿಕೊಳ್ಳುವುದು: ಅವರ ದೇಹಕ್ಕೆ ಅವರೇ ಹಾನಿ ಮಾಡಿಕೊಳ್ಳುವುದು, ಆತ್ಮಹತ್ಯೆಗೆ ಯತ್ನಿಸುವುದು ಇವೆಲ್ಲಾ ಖಿನ್ನತೆಯ ಲಕ್ಷಣವಾಗಿದೆ.

ಮಕ್ಕಳಲ್ಲಿ ಖಿನ್ನತೆ ಲಕ್ಷಣ ಕಂಡು ಬಂದರೆ ಏನು ಮಾಡಬೇಕು?
ಮಕ್ಕಳಲ್ಲಿ ಖಿನ್ನತೆ ಸಮಸ್ಯೆ ಕಂಡು ಬಂದರೆ ಆ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮಕ್ಕಳಲ್ಲಿ ಇತ್ತೀಚೆಗೆ ಖಿನ್ನತೆಯ ಲಕ್ಷಣಗಳು ಕಂಡು ಬಂದತೆ ಪೋಷಕರೇ ನೀವು ಮಾಡಬೇಕಾಗಿರುವುದು
ನಿಮ್ಮ ಮಗ/ಮಗಳ ಜೊತೆ ಮಾತನಾಡಿ: ಅವರ ಜೊತೆ ಮಾತನಾಡಿ, ಬೈಯ್ಯಬೇಡಿ, ಪ್ರೀತಿಯಿಂದಲೇ ಮಾತನಾಡಿಸಿ, ಅವರ ತಲೆಯಲ್ಲಿ ಓಡುತ್ತಿರುವ ಆಲೋಚನೆಗಳ ಬಗ್ಗೆ ತಿಳಿದುಕೊಳ್ಳಿ.
ಕೌನ್ಸಿಲಿಂಗ್ ಮಾಡಿ: ಕೌನ್ಸಿಲಿಂಗ್ ನಿಮ್ಮ ಮಗುವಿಗೆ ಮಾನಸಿಕ ಸಮಸ್ಯೆಯಿದೆ ಎಂದು ಜನರು ತಪ್ಪು ತಿಳಿಯುತ್ತಾರೆ ಎಂದು ನೀವು ಭಾವಿಸಿ ಮಗುವನ್ನು ಕೌನ್ಸಿಲಿಂಗ್ ಮಾಡಿಸದೆ ಇರಬೇಡಿ, ಏಕೆಂದರೆ ನಿಮ್ಮ ಮಗುವಿನಲ್ಲಿ ಮತ್ತೆ ಚೈತನ್ಯ ಮೂಡಬೇಕೆಂದರೆ ನೀವು ಕೌನ್ಸಿಲಿಂಗ್ ಮಾಡಿಸಿ. ಕೌನ್ಸಿಲಿಂಗ್‌ ಮಾಡುವುದರಿಂದ ಮಕ್ಕಳನ್ನು ಖಿನ್ನತೆಯಿಂದ ಹೊರತರಲು ಸಹಾಯವಾಗುವುದು.
ಅವರ ಬೆಂಬಲಕ್ಕೆ ನಿಲ್ಲಿ: ನಿಮ್ಮ ಮಗುವಿನ ಬೆಂಬಲಕ್ಕೆ ನಿಲ್ಲಿ, ಅವರ ಜೊತೆ ಯಾರೂ ಇಲ್ಲ, ಯಾರೂ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಎಂಬ ಭಾವನೆ ಮೂಡಲು ಅವಕಾಶ ನೀಡಬೇಡಿ.
ಅವರ ಮಾನಸಿಕ ಒತ್ತಡ ಕಡಿಮೆ ಮಾಡಿ: ಮಕ್ಕಳಿಗೆ ಇದೇ ಓದು, ತುಂಬಾ ಮಾರ್ಕ್ಸ್ ತಗೋಬೇಕು ಎಂದೆಲ್ಲಾ ಒತ್ತಡ ಹಾಕಬೇಡಿ.
ಅವರು ಆತ್ಮಹತ್ಯೆ ಕುರಿತು ಹೇಳಿದರೆ ನಿರ್ಲಕ್ಷ್ಯ ಮಾಡಬೇಡಿ: ನಿಮ್ಮ ಮಗು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದರೆ ನೀವು ಕೂಡಲೇ ಅವರನ್ನು ಕೌನ್ಸಿಲಿಂಗ್ ಮಾಡಿಸಿ. ಅವರನ್ನು ಆ ಆಲೋಚನೆಯಿಂದ ಹೊರತನ್ನಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries