ಪೆರ್ಲ: ಗ್ರಾಮ ಭೇಟಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಅವರು ಎಣ್ಮ್ಮಕಜೆ ಗ್ರಾಮ ಕಚೇರಿಗೆ ಭೇಟಿ ನೀಡಿದರು. ಲೈಫ್ ಮಿಷನ್, ಭೂದಾಖಲೆ, ಬಿಪಿಎಲ್ ಪಡಿತರ ಚೀಟಿ, ಎಂಡೋಸಲ್ಫಾನ್ ನೆರವು ಮುಂತಾದ ವಿವಿಧ ಸಮಸ್ಯೆಗಳ ಕುರಿತು ಸುಮಾರು ಇಪ್ಪತ್ತು ದೂರುಗಳನ್ನು ಜಿಲ್ಲಾಧಿಕಾರಿ ಸ್ವೀಕರಿಸಿದರು. ಅರ್ಜಿದಾರರ ಅಹವಾಲುಗಳನ್ನು ನೇರವಾಗಿ ಆಲಿಸಿದ ಜಿಲ್ಲಾಧಿಕಾರಿಗಳು ದೂರುಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.