ಬೆಂಗಳೂರು; ಸೆ. 18 ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಯಲ್ಲಿ 'ಪ್ರಮುಖ ವಿಷಯಗಳು' ಇವೆ. ಎಲ್ಲ ಪಕ್ಷಗಳಿಗೆ ಈ ಕುರಿತು ಶೀಘ್ರ ಮಾಹಿತಿ ರವಾನಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.

ಅಧಿವೇಶನದಲ್ಲಿ ನಡೆಯಬಹುದಾದ ಸಂಭಾವ್ಯ ಕಾರ್ಯಸೂಚಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಸಿದ್ಧತೆಯ ಅಂತಿಮ ಹಂತದಲ್ಲಿದೆ. ಶಿಷ್ಟಾಚಾರದಂತೆ ನಿಗದಿತ ಸಮಯಕ್ಕೂ ಮುಂಚಿತವಾಗಿ ಎಲ್ಲ ಪಕ್ಷಗಳಿಗೆ ಅಧಿವೇಶನ ಕುರಿತು ಮಾಹಿತಿ ನೀಡುವುದು ಕಡ್ಡಾಯ. ಇದನ್ನು ಪಾಲಿಸಲಾಗುತ್ತದೆ ಎಂದು ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳಲ್ಲಿ ಇದು ಮೊದಲ ವಿಶೇಷ ಅಧಿವೇಶನವಾಗಿದೆ. 2017ರ ಜೂನ್ 30ರಂದು ಮಧ್ಯರಾತ್ರಿ ಜಿಎಸ್‌ಟಿ ಜಾರಿಯ ಅಂಗವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ವಿಶೇಷ ಜಂಟಿ ಅಧಿವೇಶನ ನಡೆದಿತ್ತು.
ಈ ಬಾರಿ ಐದು ದಿನಗಳ ಪೂರ್ಣ ಪ್ರಮಾಣದ ಅಧಿವೇಶನ ನಡೆಯಲಿದ್ದು, ಉಭಯ ಸದನಗಳು ಪ್ರತ್ಯೇಕವಾಗಿ ಸಭೆ ಸೇರುತ್ತವೆ.