ತಿರುವನಂತಪುರಂ: ಆಹಾರ ಸುರಕ್ಷತಾ ಇಲಾಖೆ ನೇತೃತ್ವದಲ್ಲಿ ಸಂಸ್ಥೆಗಳ ಪರವಾನಗಿ ತಪಾಸಣೆಯನ್ನು ಬಿಗಿಗೊಳಿಸಲು ಆರೋಗ್ಯ ಇಲಾಖೆ ಕ್ರಮ ಬಿಗುಗೊಳಿಸಿದೆ.
ತಿರುವನಂತಪುರದಲ್ಲಿ ಷವರ್ಮಾ ಸೇವಿಸಿ ನಾಲ್ಕು ವರ್ಷದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿರುವುದು ಈ ಘಟನೆಯಿಂದ ತಿಳಿಯಬಹುದಾಗಿದೆ.
ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಆಪರೇಷನ್ ಪೋಸ್ಕೋ ಪರವಾನಗಿ ಅಭಿಯಾನವನ್ನು ನಡೆಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಘೋಷಿಸಿರುವರು. ಕಾರ್ಯಾಚರಣೆಯು ಎಲ್ಲಾ ಆಹಾರ ನಿರ್ವಾಹಕರನ್ನು ಆಹಾರ ಸುರಕ್ಷತಾ ಪರವಾನಗಿಗಳ ವ್ಯಾಪ್ತಿಯಲ್ಲಿ ತರಲು ಗುರಿಯನ್ನು ಹೊಂದಿದೆ. ಆಹಾರ ಸುರಕ್ಷತಾ ಪರವಾನಗಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.
ಆಹಾರ ಸುರಕ್ಷತೆ ಗುಣಮಟ್ಟ ಕಾಯಿದೆ 2006 ರ ಸೆಕ್ಷನ್ 31 ರ ಪ್ರಕಾರ, ಎಲ್ಲಾ ಆಹಾರ ನಿರ್ವಾಹಕರು ಆಹಾರ ಸುರಕ್ಷತಾ ಪರವಾನಗಿಯನ್ನು ಪಡೆಯಬೇಕು. ಸ್ವಯಂ ನಿರ್ಮಿತ ಆಹಾರ ಮಾರಾಟಗಾರರು, ಸಣ್ಣಪುಟ್ಟ ಚಿಲ್ಲರೆ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಗೂಡಂಗಡಿ-ಗಾಡಿಗಳಲ್ಲಿ ಮಾರಾಟ ಮಾಡುವವರು ಮತ್ತು ತಾತ್ಕಾಲಿಕ ಮಾರಾಟಗಾರರು ಮಾತ್ರ ನೋಂದಣಿ ಅನುಮತಿಯೊಂದಿಗೆ ಕಾರ್ಯನಿರ್ವಹಿಸಬಹುದು. ನೌಕರರೊಂದಿಗೆ ಆ ಅಂಗಡಿ ನಡೆಸುತ್ತಿರುವವರೂ ಪರವಾನಗಿ ಪಡೆಯಬೇಕು. ಹಲವು ವ್ಯಾಪಾರ ಸಂಸ್ಥೆಗಳು ಲೈಸೆನ್ಸ್ ತೆಗೆದುಕೊಳ್ಳುವ ಬದಲು ನೋಂದಣಿ ಪಡೆದು ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಪರವಾನಗಿ ಪರಿಶೀಲನೆ ಬಿಗಿಗೊಳಿಸಲಾಗಿದೆ.
ಆಹಾರ ಸುರಕ್ಷತಾ ಪರವಾನಗಿ ಇಲ್ಲದೆ ಆಹಾರ ಸಂಸ್ಥೆಗಳನ್ನು ನಡೆಸುವುದು ಆಹಾರ ಸುರಕ್ಷತೆ ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 63 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಪರವಾನಗಿ ಇಲ್ಲದೇ ಕೇವಲ ನೋಂದಣಿ ಮಾಡಿಕೊಂಡು ಕೆಲಸ ಮಾಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಆಹಾರ ಸುರಕ್ಷತಾ ಪರವಾನಗಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಆಹಾರ ಸುರಕ್ಷತಾ ಪರವಾನಗಿ ಇಲ್ಲದೆ ಅಥವಾ ಆಹಾರ ಸುರಕ್ಷತೆ ನೋಂದಣಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಮುಚ್ಚುವುದು ಸೇರಿದಂತೆ ಕ್ರಮಕ್ಕೆ ಒಳಪಡುತ್ತವೆ. foscos.fssai.gov.in ಪೋರ್ಟಲ್ ಮೂಲಕ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ನಿಯಮಿತ ಪರವಾನಗಿಗಳಿಗೆ ಒಂದು ವರ್ಷಕ್ಕೆ 2000 ರೂ.
ಆಹಾರ ಮಾರಾಟ ಮಾಡುವ ಸಂಸ್ಥೆಗಳು ಪರವಾನಗಿ ಪಡೆದ ನಂತರವೇ ಕಾರ್ಯನಿರ್ವಹಿಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆ ಹಲವು ಬಾರಿ ಮನವಿ ಮಾಡಿದೆ. ಇದು ಕಾನೂನು ಬಾಧ್ಯತೆಯಾಗಿದ್ದರೂ ಪರವಾನಗಿ ಪಡೆದು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳದ ಕಾರಣ ಆಹಾರ ಸುರಕ್ಷತಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪರವಾನಗಿಯ ಕೊರತೆಯಿಂದಾಗಿ ಮುಚ್ಚುವಿಕೆಯನ್ನು ಎದುರಿಸುತ್ತಿರುವ ಸಂಸ್ಥೆಗಳು ಪರವಾನಗಿಗಾಗಿ ಸಂಪೂರ್ಣ ಅರ್ಜಿಯನ್ನು ಸಲ್ಲಿಸಿದ ನಂತರ ಮಾತ್ರ ತೆರೆಯಬಹುದು.