ಎರ್ನಾಕುಳಂ: ವೀಣಾ ವಿಜಯನ್ ಒಳಗೊಂಡಿರುವ ಲಂಚ ವಿವಾದದಲ್ಲಿ ವಿಜಿಲೆನ್ಸ್ ತನಿಖೆ ಕೋರಿ ಪರಿಷ್ಕøತ ಅರ್ಜಿ ನೀಡಲಾಗಿದೆ. ಕಳಮಶ್ಚೇರಿ ಮೂಲದ ಗಿರೀಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಆದರೆ ಈ ಹಿಂದೆ ವಿಜಿಲೆನ್ಸ್ ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಮೂವಟುಪುಳ ವಿಜಿಲೆನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದಾದ ಬಳಿಕ ಮತ್ತೆ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಪ್ರಾಥಮಿಕ ಸಾಕ್ಷ್ಯಗಳು ಕೂಡ ಅರ್ಜಿಯಲ್ಲಿ ಇಲ್ಲ ಎಂದು ವಿಜಿಲೆನ್ಸ್ ನ್ಯಾಯಾಲಯ ಹೇಳಿದೆ. ಈ ಆದೇಶವನ್ನು ಪ್ರಶ್ನಿಸಿ ಪರಿಷ್ಕರಿಸಿ ಅರ್ಜಿ ಸಲ್ಲಿಸಲಾಗಿದೆ.
ಕಪ್ಪು ಮರಳು ಕಂಪನಿಯಾದ ಸಿಎಂಆರ್ ಎಲ್ ನಿಂದ ವೀಣಾ 1.72 ಕೋಟಿ ರೂ.ಲಂಚಪಡೆದಿದ್ದಾರೆಂಬುದು ದೂರು. ಆದಾಯ ತೆರಿಗೆ ಮೌಲ್ಯಮಾಪನವು ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ.