HEALTH TIPS

ಕೇರಳವನ್ನು ಗೋಕುಲವಾಗಿಸಿದ ಬಾಲಗೋಪಾಲರು: 'ಅಮಲು ಪದಾರ್ಥಗಳಿಂದ ದೂರವಿರಿ, ಮೌಲ್ಯ ಮತ್ತು ಸುಂದರ ಬಾಲ್ಯದೊಂದಿಗೆ ಎದ್ದೇಳಿ'-ಸಂದೇಶದೊಂದಿಗೆ ಭಕ್ತಿಲಹರಿಯಲ್ಲಿ ಮಿಂದೆದ್ದ ಶ್ರೀ ಕೃಷ್ಣ ಜಯಂತಿ ಶೋಭಾಯಾತ್ರೆ

                   ತಿರುವನಂತಪುರ: ಹಳದಿ ರೇμÉ್ಮ ಶಾಲು, ನವಿಲು ಗರಿಗಳನ್ನು ಧರಿಸಿದ್ದ ನೂರಾರು ಕೈಯಲ್ಲಿ ಕೊಳಲು ಹಿಡಿದು ಪುಟಾಣಿ ಕೃಷ್ಣರು ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ರಾಜ್ಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಹ್ಲಾದಕರವಾಗಿ ನಡೆಯಿತು.

                    ಭಜನಾ ತಂಡಗಳು ಶ್ರೀಕೃಷ್ಣನ ಕೀರ್ತನೆಗಳೊಂದಿಗೆ, ಪೌರಾಣಿಕ ಪಾತ್ರಗಳನ್ನು ನೆನಪಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿದರು.

                        ಬಾಲಗೋಕುಲಂ ನೇತೃತ್ವದ ಶೋಭಾಯಾತ್ರೆ ಮತ್ತೊಮ್ಮೆ ಅಂತನಂತಪುರಿಯನ್ನು ಗೋಕುಲ ನೆಲವಾಗಿ ಪರಿವರ್ತಿಸಿತು. ಶ್ರೀ ಕೃಷ್ಣ ಜಯಂತಿ ಶೋಭಾಯಾತ್ರೆಯು ಭಕ್ತಿ, ನಂಬಿಕೆ, ದೂರದೃಷ್ಟಿ, ಸಂಘಟನಾ ಶಕ್ತಿ ಎಲ್ಲದರ ದರ್ಶನವಾಗಿತ್ತು. ಈ ಬಾರಿಯ ಜನ್ಮಾಷ್ಟಮಿಯ ಸಂದೇಶ 'ಅಕಳಂಕ ಭಕ್ತಿ, ಮೌಲ್ಯ ಮತ್ತು ಬಲ' ಎಂಬುದಾಗಿತ್ತು.

                  ನಿನ್ನೆ ಮಧ್ಯಾಹ್ನದ ನಂತರ, ನಗರ ಜನಸ್ತೋಮದಿಂದ ಮೆರೆಯಿತು.  ಸೊಂಟದ ಸುತ್ತ ಒಡ್ಯಾಣಗಳನ್ನು ಧರಿಸಿದ್ದ ಮಕ್ಕಳು ನಗರದಲ್ಲಿ ಗಮನ ಸೆಳೆದರು. ರಾಧಾ ಗೋಪಿಕರ, ಕುಚೇಲರ ವೇಷ ಧರಿಸಿದ ಬಾಲಿಕಾಬಾಲರು ಮತ್ತು ವಿವಿಧ ದೇವ ಸಂಕಲ್ಪಗಳೂ ನಗರವನ್ನು ಸುಂದರಗೊಳಿಸಿದವು.

                    ವಿವಿಧೆಡೆ ಬಾಲಗೋಕುಲದಿಂದ ಬಂದ ಮಕ್ಕಳು ನಗರದ ಮ್ಯೂಸಿಯಂ, ಮಸ್ಕತ್ ಹೋಟೆಲ್, ಎಲ್ ಎಂಎಸ್, ಬೇಕರಿ, ಜನರಲ್ ಆಸ್ಪತ್ರೆ ಹೀಗೆ ಹತ್ತು ಹಲವು ಕೇಂದ್ರಗಳಲ್ಲಿ ಜಮಾಯಿಸಿ ಕೇಂದ್ರಕ್ಕೆ ಸಾಗಿದರು. ಪಾಳಯಂ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸಣ್ಣ ಮೆರವಣಿಗೆಗಳು ಜಮಾಯಿಸಲ್ಪಟ್ಟವು.

           ಸಂಗಮ ಶೋಭಾಯಾತ್ರೆಯನ್ನು ಡಾ ಬಿ. ಗೋವಿಂದನ್ ಉದ್ಘಾಟಿಸಿದರು. ಬಾಲಗೋಕುಲಂ ರಾಜ್ಯ ಸಾರ್ವಜನಿಕ ಖಜಾಂಚಿ ಕೆ.ಎನ್.ಸಜಿಕುಮಾರ್ ಶ್ರೀಕೃಷ್ಣ ಜಯಂತಿ ಸಂದೇಶ ನೀಡಿದರು. ಆಧುನಿಕ ಜೀವನದಲ್ಲಿ ಕೃಷ್ಣನ ಪರಿಕಲ್ಪನೆ ಮತ್ತು ಜೀವನ ತತ್ವದ ನೈತಿಕ ಮೌಲ್ಯಗಳನ್ನು ವ್ಯಕ್ತಪಡಿಸಲು ಬಾಲಗೋಕುಲಂ ಸೃಜನಶೀಲ ಅನುಸರಣೆಯಾಗಿದೆ ಎಂದು ಅವರು ಹೇಳಿದರು.

                       ಸಕಲ ಜೀವರಾಶಿಗಳ ಜೀವಾಳವಾಗಿ ಹರಿಯುತ್ತಿದ್ದ ಕಾಳಿಂದಿಗೆ ವಿಷ ಹಾಕಲು ಯತ್ನಿಸಿದ ಕಾಳಿಯನಂತೆ ಇಂದು ಅಧಿಕಾರ, ಹಣಬಲದ ಬೆನ್ನುಹತ್ತಿ ಮಾರಣಾಂತಿಕ ಡ್ರಗ್ ಲಾಬಿಗಳು ಬದುಕಿನ ಮುಗ್ಧ ಬಾಲ್ಯವನ್ನೇ ವಿಷಮಯಗೊಳಿಸುತ್ತಿದೆ. ಈ ಸಂಧಿಗ್ದ ಕಾಲಘಟ್ಟದಲ್ಲಿ  ಕೃಷ್ಣ ಪ್ರಜ್ಞೆಯ ನೈತಿಕ ಮೌಲ್ಯಗಳ ಮೂಲಕ ಮಕ್ಕಳಿಗೆ ಬದುಕುವ ಅಮೃತವನ್ನು ನೀಡಲು ಸಾಧ್ಯವಾಗುತ್ತದೆ ಎಂದು ಸಜಿಕುಮಾರ್ ಹೇಳಿದರು. ನರ್ತಕಿ ಗಾಯತ್ರಿ ಸುಬ್ರಮಣ್ಯಂ ಭಾಗವಹಿಸಿದ್ದರು.

             ಎಂ.ಜಿ.ರಸ್ತೆ ಮೂಲಕ ಮಹಾಶೋಭಾಯಾತ್ರೆ ಅನಂತಪದ್ಮನಾಭ ಸನ್ನಿಧಿ ಮೂಲಕ ಮಹಾ ಆರತಿಯೊಂದಿಗೆ ಪಜವಂಗಡಿ ಗಣಪತಿ ಸನ್ನಿಧಿಯಲ್ಲಿ ಸಮಾಪನಗೊಂಡಿತು.

                  ಸ್ವಾಗತ ಸಮಾರಂಭದಲ್ಲಿ ಪದಾಧಿಕಾರಿಗಳಾದ ಚೆಂಕಲ್ ರಾಜಶೇಖರನ್ ನಾಯರ್, ಕೆ.ಜಯಕುಮಾರ್, ಎಂ.ಗೋಪಾಲ್, ಪ್ರೊ.ಟಿ.ಎಸ್.ರಾಜನ್, ಸಿ.ಎಂ.ಹೇಮಚಂದ್ರನ್, ಕೆ.ಸುನೀಲ್, ಎಸ್.ರಾಜೀವ್, ಕೆ.ಎಸ್.ಶಾಜಿ, ಪಿ.ಸುಧಾಕರನ್, ಕೆ.ರಾಜಶೇಖರನ್, ಎಂ.ಮಹೇಶ್ವರನ್, ಕೆ.ಕೆ.ಹರಿಹರನ್, ಪಿ. ರಾಜಶೇಖರನ್, ಅಪರ್ಣಾ ಆರ್.ಪಿ., ಅಡ್ವ ಅಂಜನಾ, ಸುರೇಶ್, ಟಿ.ನಂದಕುಮಾರ್ ಮತ್ತಿತರರು ನೇತೃತ್ವ ವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries