ಬದಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೀರ್ಚಾಲು ಇವರ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಪ್ಟಂಬರ್ 19 ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಮಹಾಜನ ಸಂಸ್ಕøತ ಶಾಲಾ ವಠಾರದಲ್ಲಿ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಅಂದು ಬೆಳಗ್ಗೆ 7 ಗಂಟೆಗೆ ದೀಪಪ್ರತಿಷ್ಠೆ, 7.30ಕ್ಕೆ ವೇದಮೂರ್ತಿ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು ಬೇಳ ಇವರ ಪೌರೋಹಿತ್ಯದಲ್ಲಿ ಗಣಪತಿ ಹವನ, ನಾಗತಂಬಿಲ ನಡೆಯಲಿದೆ. ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಭಜನಾ ಸಂಘದವರಿಂದ ಭಜನೆ, 10.30ಕ್ಕೆ ನೀರ್ಚಾಲು ಶ್ರೀಧರ್ಮಶಾಸ್ತಾ ಕುಣಿತ ಭಜನಾ ಸಂಘದವರಿಂದ ಕುಣಿತ ಭಜನೆ, 12 ಕ್ಕೆ ಸತ್ಯವಿನಾಯಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ. ಅಪರಾಹ್ನ 2 ರಿಂದ ಪುಟಾಣಿ ಮಕ್ಕಳಿಂದ ನೃತ್ಯ ವೈವಿಧ್ಯ, ಸಂಜೆ 4 ಕ್ಕೆ ಧಾರ್ಮಿಕ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪವಿತ್ರನ್ ಕೆ.ಕೆ.ಪುರಂ ಅವರಿಂದ ಧಾರ್ಮಿಕ ಭಾಷಣ, ಸಂಜೆ 5.30ರಿಂದ ಮದ್ವಾದೀಶ ವಿಠಲ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ-ದೇಶ ಭಕ್ತಿಭಾವಸಂಗಮ ಕಾರ್ಯಕ್ರಮ ಜರಗಲಿದೆ.