ತಿರುವನಂತಪುರಂ: ಸೋಲಾರ್ ಕಿರುಕುಳ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಖುಲಾಸೆಗೊಳಿಸಿದ ಸಿಬಿಐ ವರದಿಯನ್ನು ಕೋರ್ಟ್ ಅಂಗೀಕರಿಸಿದೆ.
ಈ ವರದಿಯನ್ನು ತಿರುವನಂತಪುರ ಸಿಜೆಎಂ ಕೋರ್ಟ್ ಅನುಮೋದಿಸಿದೆ. ಉಮ್ಮನ್ ಚಾಂಡಿ ನಿಧನರಾದ ಕಾರಣ ನ್ಯಾಯಾಲಯವು ಮುಂದಿನ ಎಲ್ಲಾ ಹಂತಗಳನ್ನು ನಿಲುಗಡೆಗೊಳಿಸಿದೆ. ಕ್ಲಿಫ್ ಹೌಸ್ ನಲ್ಲಿ ಉಮ್ಮನ್ ಚಾಂಡಿ ಕಿರುಕುಳ ನೀಡಿದ್ದರು ಎಂಬ ದೂರು ಸುಳ್ಳು ಎಂದು ಸಿಬಿಐ ತಿರುವನಂತಪುರ ಸಿಜೆಎಂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.