ಕಲ್ಪಟ್ಟ: ಕೇರಳದಲ್ಲಿ ನಿಪಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ಗಡಿಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಆರೋಗ್ಯ ಇಲಾಖೆಗಳು ತಪಾಸಣೆ ಬಲಗೊಳಿಸಿದೆ. ಕರ್ನಾಟಕದ ಗಡಿಯಲ್ಲಿರುವ ಮುತ್ತಂಙ, ಬಾವಲಿ, ಮುಳಹೊಳ್ಳ, ತಳಳಪೆಟ್ಟಿ, ಮಂಜೇಶ್ವರ ಚೆಕ್‍ಪೆÇೀಸ್ಟ್‍ಗಳಲ್ಲಿ ಹಾಗೂ ತಮಿಳುನಾಡು ಗಡಿಯ ಪಟ್ಟವಯಲ್, ತಾಳೂರು, ಎರುಮಡು ಸೇರಿದಂತೆ 11 ಕಡೆಗಳಲ್ಲಿ ತಪಾಸಣೆ ಆರಂಭಿಸಿವೆ.
ವೈದ್ಯರು ಮತ್ತು ದಾದಿಯರನ್ನೊಳಗೊಂಡ ತಂಡ ಕೇರಳದಿಂದ ಬರುವ ವಾಹನಗಳನ್ನು ತಡೆದು ಯಾರಿಗಾದರೂ ಜ್ವರದ ಲಕ್ಷಣಗಳಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಕೇರಳದಿಂದ ಆಗಮಿಸುವ ಪ್ರಯಾಣಿಕರ ದೇಹದ ಉಷ್ಣತೆಯನ್ನೂ ಪರಿಶೀಲಿಸಲಾಗುತ್ತಿದೆ.
ಚೆಕ್ ಪೋಸ್ಟ್‍ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ಮೂರನೇ ದಿನವೂ ತಮಿಳುನಾಡಿನ ತಪಾಸಣೆ ಮುಂದುವರಿದಿದೆ. ತಪಾಸಣೆ ಬಿಗಿಯಾಗಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನಿಂದ ಕೇರಳಕ್ಕೆ ಬರುವ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದೆ.