ನವದೆಹಲಿ: ಒಂದು ದೇಶ, ಒಂದು ಚುನಾವಣೆಯ ಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆಯಾಗುತ್ತಿದ್ದಂತೆಯೇ ಇದು ದೇಶದಲ್ಲಿ ಚುನಾವಣೆ ಮುಂದೂಡಲು ನಡೆಸಿರುವ ಪಿತೂರಿ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಆರೋಪಿಸಿದೆ. ಇದೇ ವೇಳೆ ಇಂಡಿಯಾ ಮೈತ್ರಿಕೂಟದ ಲೋಗೋ ಬಿಡುಗಡೆ ಸಹ ಮುಂದೂಡಲ್ಪಟ್ಟಿದೆ.
ಶಿವಸೇನೆಯ ಎಂವಿಎ ಸಹೋದ್ಯೋಗಿ ಹಾಗೂ ಮಹಾರಾಷ್ಟ್ರದ ವಿಪಕ್ಷ ನಾಯಕನೂ ಆಗಿರುವ ವಿಜಯ್ ವಾಡೆತ್ತಿವಾರ್, ಈಗ ನಡೆಯುತ್ತಿರುವ ಮೈತ್ರಿಕೂಟದ ಸಭೆಯಲ್ಲಿ ಲೋಗೋ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಸಂಜಯ್ ರಾವುತ್, ನಮಗೆ ನ್ಯಾಯಸಮ್ಮತ ಚುನಾವಣೆಯಾಗಬೇಕಿದೆ. ಆದರೆ ಈಗ ಅದು ಆಗುತ್ತಿಲ್ಲ. ಒಂದು ದೇಶ, ಒಂದು ಚುನಾವಣೆ ಪ್ರಸ್ತಾವನೆ ಚುನಾವಣೆಗಳನ್ನು ಮುಂದೂಡಕ್ಕೆ ರೂಪಿಸಲಾಗುತ್ತಿರುವ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.