ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದನಾ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದನಾ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಖಚಿತ ಮಾಹಿತಿ ಆಧಾರದ ಮೇಲೆ ಕ್ರೀರಿ ಪ್ರದೇಶದಲ್ಲಿ ಮೊಬೈಲ್ ಚೆಕ್ ಪಾಯಿಂಟ್‌ಗಳನ್ನು ಆರಂಭಿಸಿದ್ದ ಪೊಲೀಸರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 3 ಗ್ರೆನೇಡ್ ಮತ್ತು ಮದ್ಡು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಲತೀಫ್ ಅಹಮ್ಮದ್ ದರ್, ಶೌಕತ್ ಅಹಮ್ಮದ್ ಲೋನ್ ಮತ್ತು ಇಶ್ರತ್ ರಸೂಲ್ ಎಂದು ಗುರುತಿಸಲಾಗಿದೆ. ಮೂವರೂ ಸಹ ತಾವು ಲಷ್ಕರ್ ಎ ತಯಬಾದ ಸದಸ್ಯರು ಎಂದು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಕ್ರೀರಿಯ ಪ್ರದೇಶದಲ್ಲಿ ನಾಲ್ವರು ಯುವಕರನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸಲು ಉದ್ದೇಶಿಸಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂವರು ಕ್ರೀರಿಯ ಪ್ರದೇಶದಲ್ಲಿ ಎಲ್‌ಇಟಿ ನೇಮಕಾತಿಯ ಮಾಸ್ಟರ್‌ಮೈಂಡ್ ಆಗಿದ್ದರು. ಅಲ್ಲದೆ, ಸಕ್ರಿಯ ಉಗ್ರಗಾಮಿಗಳಾದ ಉಮರ್ ಲೋನ್ ಮತ್ತು ವಿದೇಶಿ ಭಯೋತ್ಪಾದಕ ಉಸ್ಮಾನ್ ಅವರೊಂದಿಗೆ ಸಂಪರ್ಕದಲ್ಲಿದ್ದರು'ಎಂದು ಅಧಿಕಾರಿ ಹೇಳಿದ್ದಾರೆ.