ಕಾಸರಗೋಡು: ಶಾಸಕ ಎನ್.ಎ ನೆಲ್ಲಿಕುನ್ನು ಅವರ ಹೆಚ್ಚುವರಿ ಆಪ್ತ ಸಹಾಯಕ ತಿರುವನಂತಪುರ ಮೂಲದ ಬಾಲರಾಮಪುರ ನಿವಾಸಿ ಮನು (32)ಅಸೌಖ್ಯದಿಂದ ಗುರುವಾರ ನಿಧನರಾದರು. ಹೃದಯ ಸಂಬಂಧಿ ಅಸೌಖ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ಸಮಯದಿಂದ ಚಿಕಿತ್ಸೆಯಲ್ಲಿದ್ದರು.
ಇವರು ಬಲರಾಮಪುರಂ ಖಾಸಗಿ ಪ್ರೌಢಶಾಲೆಯ ಶಿಕ್ಷಕ ತಂಕರಾಜ್ ಮತ್ತು ಜಯ ದಂಪತಿಯ ಪುತ್ರ. ಕಳೆದ ಹತ್ತು ವರ್ಷಗಳಿಂದ ಶಾಸಕ ನೆಲ್ಲಿಕುನ್ನು ಅವರ ಆಪ್ತ ಸಹಾಯಕರಾಗಿ ತಿರುವಂತಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಪತ್ನಿ, ಒಂದು ತಿಂಗಳ ಪ್ರಾಯದ ಮಗುವನ್ನು ಅಗಲಿದ್ದಾರೆ.