ಬದಿಯಡ್ಕ: ಶ್ರೀಮದ್ ಎಡನೀರು ಮಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ಸಾಂಸ್ಕøತಿಕ ಸಂಜೆಯ ಭಾಗವಾಗಿ ಶುಕ್ರವಾರ ರಾತ್ರಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ವಿಶಿಷ್ಟರಂಗ ಸಂಯೋಜನೆಯಲ್ಲಿ ‘ಚಕ್ರವ್ಯೂಹ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನೀಯ ಹಲವು ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವ ಸಿರಿಬಾಗಿಲು ಪ್ರತಿಷ್ಠಾನದ ಈ ಅಪರೂಪದ ಕಾರ್ಯಕ್ರಮವು ಸೇರಿದ ಪ್ರೇಕ್ಷಕವನ್ನು ಸರಿ ಹಿಡಿದವು. ಥಿಯೇಟರ್ ಯಕ್ಷ (ರಿ) ಸಂಸ್ಥೆಯ ಪೃಥ್ವಿರಾಜ್ ಕವತ್ತಾರ್ ನೇತೃತ್ವದಲ್ಲಿ ಈ ಪ್ರದರ್ಶನಕ್ಕೆ ನಿರ್ದೇಶನ ನೀಡಿದ್ದರು.