ಮಂಜೇಶ್ವರ : ದೈಗೋಳಿ ಜ್ಞಾನೋದಯ ಸಮಾಜ ಆಶ್ರಯದಲ್ಲಿ 42 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪರಮಪೂಜ್ಯ ಶ್ರೀಗುರು ದೇವಾನಂದ ಸ್ವಾಮೀಜಿ ರವರ ಶುಭಾಶೀರ್ವಾದದೊಂದಿಗೆ, ವೇ. ಮೂ. ಕುರಿಯ ರಾಮ ಮೂರ್ತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗಣೇಶ ಮಂದಿರದಲ್ಲಿ ಜರಗಿತು. ಶ್ರೀ ಗಣೇಶ ವಿಗ್ರಹ ಪ್ರತಿμÁ್ಠಪನೆ, ಮಹಾ ಗಣಪತಿ ಹೋಮ,ಭಕ್ತಿಗೀತೆ ಮತ್ತು ಛದ್ಮ ವೇಷ ಸ್ವರ್ಧೆಗಳು, ಭಗವದ್ಗೀತೆ ಪಾರಾಯಣ, ನಂತರ ಶ್ರೀ ರಾಮಕೃಷ್ಣ ಭಜನಾ ಮಂಡಳಿ ದೈಗೋಳಿಯಿಂದ ಭಜನೆ ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂದಿರ ಕೋಳ್ಯೂರು ಪದವು ಇವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಯಿತು. ಅಪರಾಹ್ನ 2 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ಜರಗಿದ್ದು, ಸಭಾ ಕಾರ್ಯಕ್ರಮ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಅಂತರ್ ರಾಜ್ಯ ಮಟ್ಟದ ಕರಾಟೆ ಪಟು ಕು. ಸ್ವಾತಿ ಕೊಡಂಗೆರವರಿಗೆ ಅಭಿನಂದನೆ ಸಲ್ಲಿಸಲಾಯಿತು. ಬ್ಲಾಕ್ ಮಟ್ಟದಲ್ಲಿ ಉತ್ತಮ ಶಿಕ್ಷಕಿಯಾಗಿ ಆಯ್ಕೆಗೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದೈಗೋಳಿ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಟೀಚರ್ ಅಡೆಕಳಕಟ್ಟೆ, ಸೇವಾ ಅವಧಿಯಲ್ಲಿ ಗೋಲ್ಡನ್ ಜ್ಯೂಬಿಲಿ ಪ್ರಶಸ್ತಿ ಪಡೆದ ಪಿ. ಶಿವರಾಮ್ ಭಟ್ ಮಡ್ವ ಹಾಗೂ ಗಣೇಶೋತ್ಸವದ ಪ್ರಯೋಜಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅನಾರೋಗ್ಯದಲ್ಲಿರುವ ಐತಪ್ಪ ಕುಂಟಪದವು ಇವರಿಗೆ ಸಹಾಯ ಧನ ವಿತರಿಸಲಾಯಿತು.ಸಂಜೆ ಶೋಭಾ ಯಾತ್ರೆ ಆರಂಭವಾಗಿ ಶ್ರೀ ಗಣೇಶ ನ ವಿಸರ್ಜನಾ ಕಾರ್ಯಕ್ರಮ ಕಣಿಯೂರಿನ ಸಾರ್ವಜನಿಕ ಕೆರೆಯಲ್ಲಿ ನಡೆದು ನಂತರ ಶ್ರೀ ಗಣೇಶ ಭಕ್ತವೃಂದ ಕಣಿಯೂರು ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.