ಕಾಸರಗೋಡು: ಕೂಡ್ಲು ಮನ್ನಿಪ್ಪಾಡಿ ಆಲಂಗೋಡು ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಮುಷ್ಟಿ ಕಾಣಿಕೆ ,ಸಮರ್ಪಣೆಯೊಂದಿಗೆ "ಊರ ಭಕ್ತಾದಿಗಳ ಸಭೆ" ಕ್ಷೇತ್ರದ ತಂತ್ರಿವರ್ಯರಾದ, ಅರವತ್ತು ಪದ್ಮನಾಭ ತಂತ್ರಿ ಅವರ ಅನುಗ್ರಹ ಆಶೀರ್ವಾದದೊಂದಿಗೆ ಜರುಗಿತು. ದೈವಸ್ಥಾನ ಜೀರ್ಣೋದ್ಧಾರ ನವೀಕರಣ ಕಾರ್ಯಗಳ ಹಿನ್ನೆಲೆಯಲ್ಲಿ ಕಾರ್ಯಖ್ರಮ ಆಯೋಜಿಸಲಾಗಿತ್ತು.
ಹಿರಿಯ ಧಾರ್ಮಿಕ ಮುಂದಾಳು, ಉದ್ಯಮಿ ವಸಂತ ಪೈ ಬದಿಯಡ್ಕ ಸಮಾರಂಭ ಉದ್ಘಾಟಿಸಿ ಮಾತನಾಡಿ, "ಹಣದಿಂದ ಭಗವಂತನನ್ನು ಒಲಿಸಲು ಸಾಧ್ಯವಿಲ್ಲ , ಭಕ್ತಿ ಸನ್ಮಾರ್ಗದಿಂದ ಭಕ್ತಿಯ ಪಥದಲ್ಲಿ ನಡೆದರೆ ಭಗವಂತನನ್ನು ಕಾಣಬಹುದು. ಇಂತಹ ಪುಣ್ಯಕಾರ್ಯದಲ್ಲಿ ನಾವು ಪಾಲ್ಗೊಂಡು ನಮ್ಮ ಜೀವನ ಪಾವನವಾಗಬೇಕು ಎಂದು ತಿಳಿಸಿದರು. ಕ್ಷೇತ್ರದ ಅನುವಂಶಿಕ ಮೊಕ್ತೆಸರ ಕೆ.ಜಿ. ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖ್ಯಾತ ವೈದ್ಯ ಡಾ. ತೇಜಸ್ವಿ ವ್ಯಾಸ ಶ್ಯಾನುಭಾಗ್, ಮಧೂ ರು ಗ್ರಾಮ ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ವರ್ಕಾಟಿ ಕೂಟತ್ತಜೆ ಉಳ್ಳಾಲ್ತಿ ದೈವಸ್ಥಾನದ ಅನುವಂಶಿಕ ಮೊಕ್ತೆಸರ ಡಾ. ಹರಿಕಿರಣ ಬಂಗೇರ , ಕ್ಷೇತ್ರದ ಪುರೋಹಿತ ಸೂರ್ಯನಾರಾಯಣ ಅಡಿಗ, ಧಾರ್ಮಿಕ ಮುಂದಾಳು ವಕೀಲ ಬಾಲಕೃಷ್ಣ ನಾಯರ್ ಉಪಸ್ಥಿತರಿದ್ದರು. ಧೂಮಾವತೀ ಬಾಲ ಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ಅಲಂಗೋಡು ಶ್ರೀ ಧೂಮಾವತೀ ಸೇವಾ ಸಮಿತಿಯ ಅಧ್ಯಕ್ಷ ಉದಯಕುಮಾರ್ ಮನ್ನಿಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಗಟ್ಟಿ ಕಾರ್ಯಕ್ರಮವ ನಿರೂಪಿಸಿದರು. ಕೋಶಾಧಿಕಾರಿ ಚಂದ್ರಶೇಖರಗಟ್ಟಿ ವಂದಿಸಿದರು.