HEALTH TIPS

ಆತಂಕ ಹುಟ್ಟಿಸುತ್ತಿರುವ ಹಾಸ್ಟೆಲ್​ಗಳು; ನಿಗೂಢವಾಗಿ ಸಾವಿಗೀಡಾದ ಏಮ್ಸ್​ ವೈದ್ಯ!

             ವದೆಹಲಿ: ಕೋಚಿಂಗ್​ ಹಬ್ ಎಂದೇ ಹೆಸರಾಗಿರುವ ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್​ಗೆ ಎಂದು ಬರುತ್ತಿರುವ ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣದಿಂದ ಅಲ್ಲಿ ಹಾಸ್ಟೆಲ್​ ಎಂದರೇನೇ ಹೆದರುವಂಥ ಸನ್ನಿವೇಶ ಸೃಷ್ಟಿಯಾಗಿದೆ.

            ಈ ಮಧ್ಯೆ ಬಿಹಾರದ ಪಾಟ್ನಾದ ಏಮ್ಸ್​ನ ವೈದ್ಯ ಕೂಡ ಹಾಸ್ಟೆಲ್​ನಲ್ಲಿ ಸಾವಿಗೀಡಾಗಿದ್ದಾನೆ.

ಹರಿಯಾಣದ ಗುರುಗ್ರಾಮ ಮೂಲದ ನೀಲೇಶ್​ ಕುಮಾರ್ ಎಂಬ ಈತ ಬಿಹಾರದ ಪಾಟ್ನಾ ಎಐಐಎಂಎಸ್​ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ. ಶುಕ್ರವಾರ ಈತ ತನ್ನ ಹಾಸ್ಟೆಲ್​ ರೂಮ್​ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದ.

                ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ಈತ, 2016-21ರಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದ. ಈತ ಪಾಟ್ನಾ ಏಮ್ಸ್​ನಲ್ಲಿ ವೈದ್ಯನಾಗಿಯೂ ಅಭ್ಯಾಸ ಮಾಡುತ್ತಿದ್ದ. ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries