ಗುವಾಹಟಿ: 'ಗ್ರೇಟರ್ ಟಿಪ್ರಾಲ್ಯಾಂಡ್' ರಚಿಸಬೇಕು ಎಂಬ ಬೇಡಿಕೆ ಈಡೇರಿಕೆಯು ವಿಳಂಬ ಆಗುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಟಿಪ್ರಾ ಮೊಥಾ ಪಕ್ಷ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒಂದು ದಿನದ ತ್ರಿಪುರಾ ಬಂದ್‌ಗೆ ಕರೆ ನೀಡಿದೆ.
ಗುವಾಹಟಿ: 'ಗ್ರೇಟರ್ ಟಿಪ್ರಾಲ್ಯಾಂಡ್' ರಚಿಸಬೇಕು ಎಂಬ ಬೇಡಿಕೆ ಈಡೇರಿಕೆಯು ವಿಳಂಬ ಆಗುತ್ತಿರುವುದಕ್ಕೆ ಆಕ್ರೋಶಗೊಂಡಿರುವ ಟಿಪ್ರಾ ಮೊಥಾ ಪಕ್ಷ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಒಂದು ದಿನದ ತ್ರಿಪುರಾ ಬಂದ್‌ಗೆ ಕರೆ ನೀಡಿದೆ.
ಅಗರ್ತಲಾದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಟಿಪ್ರಾ ಮೊಥಾ ನಾಯಕ ಮತ್ತು ತ್ರಿಪುರಾದ ರಾಜವಂಶಸ್ಥ ಪ್ರದ್ಯೋತ್ ದೇಬ್ ಬರ್ಮಾ ಅವರು, 'ಬಂದ್ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು' ಎಂದು ತಿಳಿಸಿದರು.
ದೇಬ್ ಬರ್ಮಾ ಮತ್ತು ಪಕ್ಷದ ಕೆಲ ನಾಯಕರು ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ 'ಗ್ರೇಟರ್ ಟಿಪ್ರಾಲ್ಯಾಂಡ್' ಕುರಿತು ಚರ್ಚಿಸಿದ ಕೆಲ ದಿನಗಳ ಬೆನ್ನಲ್ಲೇ ಟಿಪ್ರಾ ಮೊಥಾ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ.
'ನಮ್ಮ ಬೇಡಿಕೆ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿದೆ. ಗೃಹ ಸಚಿವ ಅಮಿತ್ ಶಾ ಅವರೂ ಗಂಭೀರವಾಗಿದ್ದಾರೆ. ಆದರೆ ನಾವು ಬೇಡಿಕೆ ಈಡೇರುವ ತನಕ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಬೇಕು. ಈ ಮೂಲಕ ಸ್ಥಳೀಯರಿಗೆ ಸಂವಿಧಾನದ ಹಕ್ಕುಗಳು ದೊರೆಯುವಂತೆ ಮಾಡಬೇಕು' ಎಂದು ಅವರು ಹೇಳಿದರು.