ಲಖನೌ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಆಗಸ್ಟ್ 4ರಿಂದ ಕೈಗೊಂಡಿದ್ದ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯು ಶುಕ್ರವಾರ ಪೂರ್ಣಗೊಂಡಿದ್ದು, ಶನಿವಾರ ಸಮೀಕ್ಷಾ ವರದಿಯನ್ನು ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು.

29 ದಿನಗಳ ಸುದೀರ್ಘ ವೈಜ್ಞಾನಿಕ ಸಮೀಕ್ಷೆಯಲ್ಲಿ ಎಎಸ್‌ಐ ತಂಡವು ಭೂ ಭೇದಕ ರಾಡಾರ್ (ಜಿಪಿಆರ್) ಮತ್ತು ಇತರ ವೈಜ್ಞಾನಿಕ ಉಪಕರಣಗಳನ್ನು ಬಳಸಿ ಜ್ಞಾನವಾಪಿ ಮಸೀದಿ ಆವರಣದ ಕೆಳಗೆ ಏನಿದೆ ಎಂಬುದನ್ನು ಖಚಿತಪಡಿಸಿಕೊಂಡಿದೆ.
ಪ್ರಾರ್ಥನೆಗೂ ಮುನ್ನ ಮುಸ್ಲಿಮರು ಕೈಕಾಲು ಮುಖ ತೊಳೆದುಕೊಳ್ಳುವ ಸ್ಥಳವಾದ 'ವುಜುಖಾನಾ' ಹೊರತುಪಡಿಸಿ ಮಸೀದಿ ಆವರಣದಲ್ಲಿನ ಒಳ ಮತ್ತು ಹೊರಗೋಡೆಗಳು, ನೆಲಮಾಳಿಗೆ ಮತ್ತು ಆವರಣದ ಇತರ ಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಎಎಸ್‌ಐ ವೈಜ್ಞಾನಿಕ ಸಮೀಕ್ಷೆಗಾಗಿ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿ ಮುಸ್ಲಿಮರ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು.