ಲಾಹೋರ್: ಭಾರತದ ಸಿಖ್ ಮತ್ತು ಹಿಂದೂ ಯಾತ್ರಿಕರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವ ಅನೀಕ್ ಅಹಮ್ಮದ್ ಗುರುವಾರ ತಿಳಿಸಿದ್ದಾರೆ.
ಲಾಹೋರ್: ಭಾರತದ ಸಿಖ್ ಮತ್ತು ಹಿಂದೂ ಯಾತ್ರಿಕರನ್ನು ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವ ಅನೀಕ್ ಅಹಮ್ಮದ್ ಗುರುವಾರ ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತದ ಯಾತ್ರಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದ್ದಾರೆ.
ಎರಡು ದೇಶಗಳ ನಡುವಿನ ಒಪ್ಪಂದದ ಪ್ರಕಾರ ಪ್ರತಿ ವರ್ಷ ಅಂದಾಜು 7,500 ಸಿಖ್ ಮತ್ತು ಸಾವಿರ ಮಂದಿ ಹಿಂದೂ ಯಾತ್ರಿಕರು ಪಾಕಿಸ್ತಾನಕ್ಕೆ ಭೇಟಿ ನೀಡಬಹುದು. ಕಳೆದ ವರ್ಷ ಬಾಬಾ ಗುರು ನಾನಕ್ ಜಯಂತಿ ಮತ್ತು ವೈಶಾಖಿ ಮೇಳದಲ್ಲಿ ಭಾರತದ ಸಿಖ್ ಸಮುದಾಯದ ಅಂದಾಜು 5 ಸಾವಿರ ಮಂದಿ ಪಾಲ್ಗೊಂಡಿದ್ದರು ಎಂದಿದ್ದಾರೆ.
ಶಿವ ಅವತಾರಿ ಸಂತ ಶಾದರಾಮ್ ಸಾಹಿಬ್ ಜಯಂತಿಯಲ್ಲಿ ಪಾಲ್ಗೊಳ್ಳಲು ಹಾಗೂ ಪಂಜಾಬ್ ಪ್ರಾಂತ್ಯದಲ್ಲಿರುವ ಕಟಾಸ್ ರಾಜ್ ದೇವಾಲಯಕ್ಕೆ ಕಳೆದ ವರ್ಷ 300 ಮಂದಿ ಹಿಂದೂ ಯಾತ್ರಿಕರು ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.