ತಿರುವನಂತಪುರಂ: ಹಿಂದೂ ನಂಬಿಕೆಗಳನ್ನು ಅವಮಾನಿಸುವ ರೀತಿಯಲ್ಲಿ ಹೋಮ್ ಸ್ಟೇ ಆಪರೇಟರ್ ಸಂದೀಪಾನಂದ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ವಿರುದ್ಧ ದೂರು ದಾಖಲಿಸಲು ಪೋಲೀಸರು ವಿಳಂಬ ಮಾಡಿದ್ದಾರೆ.
ಆಗಸ್ಟ್ 3 ರಂದು ನೀಡಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ.
ಆಗಸ್ಟ್ 2 ರಂದು ಸಂದೀಪಾನಂದ ಅವರು ಹಿಂದೂ ನಂಬಿಕೆಗಳನ್ನು ದೂಷಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಭಕ್ತರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. ಆರ್‍ಟಿಐ ಕಾರ್ಯಕರ್ತ ಮನೋಜ್ ಕಾರ್ತಿಕ ಅವರು ಸಂದೀಪಾನಂದಗಿರಿ ವಿರುದ್ಧ ಪತ್ತನಂತಿಟ್ಟ ಪೋಲೀಸ್ ಠಾಣೆ ಮತ್ತು ಎಸ್‍ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ನಾನು ದೂರು ನೀಡಿದಾಗ ಠಾಣೆಯಿಂದ ಕೆಟ್ಟ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ದೂರುದಾರರು ಹೇಳಿದ್ದಾರೆ. ಹಲವು ಬಾರಿ ಪೋಲೀಸ್ ಠಾಣೆಗೆ ಹೋದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದೂ ಮನೋಜ್ ಕಾರ್ತಿಕ ತಿಳಿಸಿದ್ದಾರೆ.
ಇದು ಹಿಂದೂ ವಿರೋಧಿ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇರುವ ಹಿಂಜರಿಕೆಯನ್ನು ತೋರಿಸುತ್ತದೆ. ಪತ್ತನಂತಿಟ್ಟ ಪೋಲೀಸ್ ಅಧಿಕಾರಿಗಳ ಕ್ರಮವು ಹಿಂದೂ ನಂಬಿಕೆಗಳಿಗೆ ಅಪಚಾರ ಮಾಡುವ ಸಂದೀಪಾನಂದರಂತಹವರಿಗೆ ಬೆಂಬಲ ನೀಡುವ ರೀತಿಯಲ್ಲಿದೆ ಎಂದಿರುವರು.