ತಿರುವನಂತಪುರಂ: ರಾಜಧಾನಿ ತಿರುವನಂತಪುರದಲ್ಲಿ ಮತ್ತಿಬ್ಬರಿಗೆ ನಿಪಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಎರಡು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು.
ಕೋಝಿಕ್ಕೋಡ್‍ನ ವೈದ್ಯಕೀಯ ವಿದ್ಯಾರ್ಥಿ ಮತ್ತು ಕಾಟ್ಟಾಕ್ಕಡದ ಮಹಿಳೆಯೊಬ್ಬರು ರೋಗಲಕ್ಷಣಗಳನ್ನು ಹೊಂದಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ. ಕಾಟಾಕ್ಕಡ ನಿವಾಸಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆಯ ಸಂಬಂಧಿಕರು ಕೋಝಿಕ್ಕೋಡ್‍ನಿಂದ ಬಂದಿದ್ದರು. ಆಗ ಅವರಲ್ಲಿ ರೋಗದ ಲಕ್ಷಣಗಳು ಕಂಡು ಬಂದವು. ವೈದ್ಯಕೀಯ ವಿದ್ಯಾರ್ಥಿ ಮತ್ತು ಕಾಟ್ಟಾಕಡ ಮೂಲದವರ ಲಲಾರಸವನ್ನು ಪರೀಕ್ಷೆಗೆ ಕಳುಹಿಸಲಾಗುವುದು.