ತಿರುವನಂತಪುರಂ: ಕೇರಳದ ಬಿPಜೆಪಿ ಮುಖಂಡರೊಬ್ಬರು ತಮ್ಮ ಪುತ್ರಿಯ ವಿವಾಹದ ಸಂದರ್ಭ ಮೂರು ಮಂದಿ ಬಡಜನತೆಗೆ ಭೂಮಿ ಹಂಚುವ ಮೂಲಕ ಮಾದರಿಯಾಗಿದ್ದಾರೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎನ್. ಶ್ರೀಪ್ರಕಾಶ್ ಅವರು ಪುತ್ರಿ ಡ. ಅಪರ್ಣಾ ಅವರ ವಿವಾಹ ದಿನದಂದು ಬಡ ಮೂರು ಕುಟುಂಬಗಳಿಗೆ ತಲಾ ಮೂರು ಸಎಂಟ್ ಜಾಗ ದಾನ ಮಾಡಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ ಪಂಚಾಯಿತಿಯ ದೀಪು ಕುನ್ನುಮ್ಮಲ್, ಮಾರಿಯಪ್ಪನ್ ಕುಳಿಕ್ಕಾಟ್ಟೇರಿ ಹಾಘೂ ತೂವೂರ್ ಪಂಚಾಯಿತಿಯ ಸುನೀರಾ ಆನಪಟ್ಟತ್ತ್ ಎಂಬವರಿಗೆ ಈ ಭೂಮಿ ಹಂಚಿಕೆ ಮಾಡಿದ್ದಾರೆ. ಮದುವೆ ಮಂಟಪದಲ್ಲಿ ಶ್ರೀಪ್ರಕಾಶ್ ಅವರ ಪತ್ನಿ ಶೆಫಾಶ್ರೀಪ್ರಕಾಶ್ ಭೂಮಿಯ ಹಕ್ಕುಪತ್ರ ಹಸ್ತಾಂತರಿಸಿದರು. ಪುತ್ರಿಯ ವಿವಾಹ ಸಮಾರಂಭದಲ್ಲಿ ಬಡ ಮೂರು ಕುಟುಂಬಗಳಿಗೆ ಭೂಮಿ ವಿತರಿಸುವಲ್ಲಿ ಸಂತೋಷವಿರುವುದಾಗಿ ಪಾಂಡಿಕ್ಕಾಡ್ ವೃಂದಾವನಂ ವಿದ್ಯಾಪೀಠ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರೂ ಆಗಿರುವ ಶ್ರೀಪ್ರಕಾಶ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ರೀಪ್ರಕಾಶ್ ಅವರು ಈ ಹಿಂದೆಯೂ ಹಲವು ಸೇವಾ ಯೋಜನೆಗಳನ್ನು ನಡೆಸಿಕೊಟ್ಟಿದ್ದಾರೆ.