ಕಾಸರಗೋಡು: ಸಾಹಿತ್ಯ ಅನುವಾದ ಕ್ಷೇತ್ರದಲ್ಲಿ ಕಾಸರಗೋಡಿಗೆ ಶ್ರೇಷ್ಠ ಪರಂಪರೆಯಿದ್ದು, ಆ ಪರಂಪರೆಯನ್ನು ಉಳಿಸುವುದೇ ಬಹುಭಾಷಾ ಅಧ್ಯಯನ ಕೇಂದ್ರದ ಮುಖ್ಯ ಗುರಿ ಎಂಬುದಗಿ ಕಣ್ಣೂರು ವಿಶ್ವ ವಿದ್ಯಾಲಯದ ಸಹಾಯಕ ಉಪಕುಲಪತಿ ಪ್ರೊ..ಎ.ಸಾಬು ತಿಳಿಸಿದ್ದಾರೆ.
ಅವರು ಕಣ್ಣೂರು ವಿಶ್ವವಿದ್ಯಾನಿಲಯದ ಬಹುಭಾಷಾ ಕೇಂದ್ರ ಮತ್ತು ನಾಟ್ಯರತ್ನಂ ಕಣ್ಣನ್ ಪಟ್ಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಭಾಷಾಂತರ ಕಾರ್ಯಾಗಾರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನುವಾದ ಕ್ಷೇತ್ರಕ್ಕೆ ಸಿ.ರಾಘವನ್ ಮತ್ತು ಕೆ.ವಿ.ಕುಮಾರನ್ ಅವರ ಕೊಡುಗೆ ಅಪಾರವಾಗಿದ್ದು, ಇವರಿಗೆ ಉತ್ತರಾಧಿಕಾರಿಗಳಾಗಿ ಹೊಸ ತಲೆಮಾರಿನಿಂದ ಅನುವಾದಕರಾಗಿ ಬರಬೇಕಾಗಿದೆ. ಸಾಹಿತ್ಯ ಮತ್ತು ವಿಜ್ಞಾನವು ಸ್ಥಳೀಯ ಭಾಷೆಗಳಿಗೆ ಅನುವಾದಗೊಂಡಾಗ ಮಾತ್ರ ಸಾಮಾನ್ಯ ಜನರನ್ನು ತಲುಪಲು ಸಾಧ್ಯ ಎಂದು ತಿಳಿಸಿದರು.
ಸಿಂಡಿಕೇಟ್ ಸದಸ್ಯ ಪ್ರೊ..ಎಂ.ಸಿ.ರಾಜು ಅಧ್ಯಕ್ಷ ತೆ ವಹಿಸಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಎಸ್.ಅನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಸಿ.ಕೆ.ಆಸಲತಾ, ಡಾ.ಎಸ್.ತೆನ್ನರಸು, ಡಾ.ರಿಜುಮೋಲ್, ಆರ್.ಎಸ್.ಅಶ್ವತಿ, ಟಿ.ಆರೋಮಲ್, ಡಾ.ಎ.ಎಂ.ಶ್ರೀಧರನ್ ಉಪಸ್ಥಿತರಿದ್ದರು.