ನಾವು ನಮ್ಮ ಮುಖದ ಸೌಂದರ್ಯಕ್ಕೆ ಎಷ್ಟು ಬೆಲೆ ಕೊಡುತ್ತೇವೆಯೋ ಕೂದಲಿನ ಆರೋಗ್ಯಕ್ಕೂ ಕೂಡ ಅಷ್ಟೇ ಗಮನ ಹರಿಸಲೇಬೇಕು. ಇತ್ತೀಚಿಗೆ ಕೆಲಸ ಒತ್ತಡದ ಜೀವನದ ನಡುವೆ ಕೂದಲಿನ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮಗೆಲ್ಲರಿಗೂ ನೆನಪಿರಬಹುದು ಹಳೆಯ ಕಾಲದಲ್ಲಿ ಅಜ್ಜಿಯಂದಿರು ತಲೆ ಕೂದಲಿನ ಆರೈಕೆಯ ಬಗ್ಗೆ ಸಾಕಷ್ಟು ಮನೆಮದ್ದುಗಳನ್ನು ಹೇಳುತ್ತಿದ್ದರು ನಾವು ಚಿಕ್ಕವರಾಗಿರುವಾಗ ನಮಗೆ ಅಂತಹ ಮನೆ ಮುದ್ದುಗಳನ್ನು ಹಚ್ಚಿ ಕೂದಲು ಚೆನ್ನಾಗಿ ಬೆಳೆಯುವಂತೆ ಮಾಡುತ್ತಿದ್ದರು. ಆದರೆ ಈಗ ನಮಗೆ ಅದಕ್ಕೆಲ್ಲ ಟೈಮ್ ಇಲ್ಲ. ಹಾಗಾಗಿ ಕೂದಲಿನ ಆರೋಗ್ಯ ಕೂಡ ಹದಗೆಡುತ್ತಿದೆ.
ಮಜ್ಜಿಗೆಯಿಂದ ಕೂದಲು ಚೆನ್ನಾಗಿ ಬೆಳೆಯುತ್ತಾ?
ಹಾಲನ್ನು ಕಾಯಿಸಿ ಅದರಿಂದ ಕೆನೆ ತೆಗೆದು ಮೊಸರು ಮಾಡಿ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿಯೂ ಪ್ರೊಟೀನ್ ಗಳು, ಕೊಬ್ಬು, ಲ್ಯಾಕ್ಟಿಕ್ ಆಮ್ಲ ಮೊದಲಾದ ಉತ್ತಮ ಅಂಶಗಳು ಇವೆ. ಹಾಗಾಗಿ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಾಗ ದೇಹ ತಂಪಾಗಿ ಇರುವುದಕ್ಕೆ ಮಜ್ಜಿಗೆ ಬಳಸುವುದು ಸಾಮಾನ್ಯ. ಬಹುತೇಕ ಹಳ್ಳಿ ಪ್ರದೇಶಗಳಲ್ಲಿ ಪ್ರತಿನಿತ್ಯ ಊಟಕ್ಕೆ ಮಜ್ಜಿಗೆಯನ್ನು ಬಳಸುತ್ತಾರೆ. ಆದರೆ ನಿಮಗೆ ಮಜ್ಜಿಗೆ ಸೇವಿಸಲು ಇಷ್ಟವಿಲ್ಲದೇ ಇದ್ದರೆ ನಿಮ್ಮ ಕೂದಲಿಗೆ ಬಳಸಬಹುದು ನೋಡಿ.
ಕೂದಲಿಗೆ ಮಜ್ಜಿಗೆಯ ಆರೈಕೆ:
ಇದು ಸ್ವಲ್ಪ ವಿಚಿತ್ರ ಅನಿಸಿದರು ನಿಜ. ಮಜ್ಜಿಗೆಯಿಂದ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು. ಇದನ್ನ ತಜ್ಞರು ಕೂಡ ಶಿಫಾರಸು ಮಾಡುತ್ತಾರೆ. ಕೂದಲ ಬೆಳವಣಿಗೆಗೆ ಬಳಸಬಹುದಾದ ನೈಸರ್ಗಿಕ ವಸ್ತುಗಳಲ್ಲಿ ಮಜ್ಜಿಗೆ ಕೂಡ ಒಂದು. ಇದು ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಮಜ್ಜಿಗೆಯಲ್ಲಿ ಇರುವ ಲ್ಯಾಕ್ಟಿಕ್ ಆಮ್ಲ, ನೆತ್ತಿಯನ್ನು ಎಫ್ಲೋಲಿಯಟ್ ಮಾಡಲು ಸಹಾಯ ಮಾಡುತ್ತದೆ ಅಂದರೆ ನೆತ್ತಿಯಲ್ಲಿ ಇರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಕೂದಲು ಆರೋಗ್ಯಕರ ವಾತಾವರಣದಲ್ಲಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಮಜ್ಜಿಗೆಯಲ್ಲಿರುವ ಪ್ರೋಟೀನ್ ಅಂಶಗಳು ಕೂದಲಿನ ಎಳೆಎಳೆಯ ರಕ್ಷಣೆಯನ್ನು ಕೂಡ ಮಾಡುತ್ತದೆ ಅಂದ್ರೆ ನೀವು ನಂಬಲೇಬೇಕು.
ಕೂದಲಿಗೆ ಮಜ್ಜಿಗೆ ಆರೈಕೆ ಮಾಡುವುದು ಹೇಗೆ
ಹೊರಗಿನಿಂದ ತರುವುದಕ್ಕಿಂತ ಮನೆಯಲ್ಲೇ ಮಜ್ಜಿಗೆ ತಯಾರಿಸಿಕೊಂಡು ಅದನ್ನು ಕೂದಲಿಗೆ ಬಳಸಿದರೆ ಒಳ್ಳೆಯದು. ಮಜ್ಜಿಗೆ ಮಾಡುವುದು ಹೇಗೆ ಎನ್ನುವ ಸರಳ ವಿಧಾನ ಇಲ್ಲಿದೆ ನೋಡಿ. ಒಂದು ಕಪ್ ಹಾಲಿಗೆ ಒಂದು ಚಮಚ ನಿಂಬೆರಸ ಅಥವಾ ವಿನೆಗರ್ ಅನ್ನು ಹಾಕಿ. ಆಗ ಹಾಲು ಒಡೆದು ಮೊಸರು ಆಗುತ್ತದೆ. ಆ ಮೊಸರನ್ನು ಕಡೆದು ಮಜ್ಜಿಗೆ ತಯಾರಿಸಿ, ಮಜ್ಜಿಗೆಯನ್ನು ನಿಮ್ಮ ನೆತ್ತಿಯ ಭಾಗಕ್ಕೆ ಹಾಗೂ ಕೂದಲಿಗೆ ಸರಿಯಾಗಿ ಲೇಪಿಸಬೇಕು.
ಮಜ್ಜಿಗೆ ದ್ರವ ರೂಪದಲ್ಲಿ ಇರುವಂತಹ ವಸ್ತು. ಹಾಗಾಗಿ ಕೂದಲಿಗೆ ಹಚ್ಚಿದರೆ ನೀರು ಹಚ್ಚಿದಂತಹ ಅನುಭವವೇ ಆಗುತ್ತದೆ. ಮಜ್ಜಿಗೆಯನ್ನು ಹಚ್ಚಿದ ನಂತರ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಕೂದಲು ಎಷ್ಟು ಉದ್ದ ಇದೆಯೋ ಅದರ ತುದಿಯವರೆಗೂ ಮಜ್ಜಿಗೆಯನ್ನು ಹಚ್ಚಬೇಕು. ಮಜ್ಜಿಗೆಯಲ್ಲಿರುವ ಎಣ್ಣೆಯುಕ್ತಅಂಶ ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿದರೆ ಅದು ಕೂದಲನ್ನ ಗಟ್ಟಿಯಾಗಿಸುತ್ತದೆ. ಹೀಗೆ ಚೆನ್ನಾಗಿ ನಿಮ್ಮ ಕೂದಲಿಗೆ ಮಜ್ಜಿಗೆಯನ್ನು ಲೇಪಿಸಿ ನಿಮ್ಮ ಬೆರಳುಗಳಿಂದ ನೆತ್ತಿಗೆ ಮಸಾಜ್ ಮಾಡಿ. ಮಜ್ಜಿಗೆ ಲೇಪಿಸಿದಂತೆ ಆಗುತ್ತೆ ಜೊತೆಗೆ ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತೆ. ಇದರಿಂದಾಗಿ ನಿತೀ ಭಾಗದಲ್ಲಿಯೂ ಕೂಡ ಚೈತನ್ಯ ಮೂಡುವುದರ ಜೊತೆಗೆ ಕೂದಲು ಸಮೃದ್ಧವಾಗಿ ಬೆಳೆಯಲು ಕೂಡ ಸಹಾಯವಾಗುತ್ತದೆ. ನಿಮ್ಮ ನೆತ್ತಿ ಹಾಗೂ ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿಕೊಂಡು ನಂತರ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಡಬೇಕು. ಇದು ದ್ರವರೂಪವಾಗಿರುವ ಮಜ್ಜಿಗೆ ಆದ್ದರಿಂದ ಕೂದಲಿನಿಂದ ಅದು ಕೆಳೆಗೆ ಇಳಿಯಬಹುದು. ಹಾಗಾಗಿ ನೀವು ತಲೆಗೆ ಶವರ್ ಕ್ಯಾಪ್ ಅಥವಾ ಟವೆಲ್ ಸುತ್ತಿಕೊಳ್ಳಬಹುದು. ಗಣೇಶ ಚತುರ್ಥಿ 2023: ಶುಭ ಕೋರಲು ಇಲ್ಲಿದೆ ಗ್ರೀಟಿಂಗ್ಸ್ 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಬೇಕು. ಮಜ್ಜಿಗೆಯಲ್ಲಿ ಎಣ್ಣೆ ಅಂಶ ಇರುವುದರಿಂದ ಜಿಗುಟಾದ ಅನುಭವ ಉಂಟಾಗಬಹುದು. ಹಾಗಾಗಿ ಚೆನ್ನಾಗಿಯೇ ಕೂದಲನ್ನು ತೊಳೆದುಕೊಳ್ಳಿ. ತೊಳೆದುಕೊಂಡ ನಂತರ ನಿಮಗೆ ಅಗತ್ಯವಿದ್ದರೆ ನೀವು ಇಷ್ಟಪಡುವ ಕಂಡೀಷನರ್ ಅನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಬಳಿಕ ಕೂದಲನ್ನು ಸ್ವಚ್ಛವಾಗಿರುವ ಟವೆಲ್ ನಿಂದ ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ. ಬಳಿಕ ನಿಮಗೆ ಬೇಕಾಗಿರುವ ಹೇರ್ ಸ್ಟೈಲ್ ಮಾಡಿಕೊಳ್ಳಬಹುದು. ಕೂದಲಿಗೆ ಮಜ್ಜಿಗೆ ಹಚ್ಚುವುದರಿಂದ ಕೂದಲಿಗೆ ಯಾವುದೇ ಹಾನಿ ಇಲ್ಲ. ಆದರೂ ನಿಮಗೆ ಹಾಲು ಅಥವಾ ಮಜ್ಜಿಗೆ ಅಲರ್ಜಿ ಇದ್ದರೆ ನೆತ್ತಿಯ ಸ್ವಲ್ಪ ಭಾಗಕ್ಕೆ ಮಜ್ಜಿಗೆ ಹಚ್ಚಿ ನೋಡಿ ಯಾವುದೇ ತುರಿಕೆ ಕಾಣಿಸಿಕೊಂಡಿಲ್ಲ ಅಂದರೆ ನೀವು ನಿಮ್ಮ ಸಂಪೂರ್ಣ ಕೂದಲಿಗೆ ಮಜ್ಜಿಗೆ ಚಿಕಿತ್ಸೆ ಮಾಡಬಹುದು. ಈ ರೀತಿ ನಮ್ಮ ಕೂದಲಿಗೆ ನಾವು ಮಜ್ಜಿಗೆಯಿಂದ ನಿಯಮಿತವಾಗಿ ಆರೈಕೆ ಮಾಡುತ್ತಾ ಬಂದರೆ ತಾಯಿ ಅಥವಾ ಅಜ್ಜಿ ಆರೈಕೆ ಮಾಡಿದ ಅನುಭವವೇ ಆಗುತ್ತದೆ. ಕೂದಲು ಸದೃಢವಾಗಿ ಬೆಳೆಯುತ್ತದೆ ಜೊತೆಗೆ ಕೂದಲಿನಲ್ಲಿ ಶೈನಿಂಗ್ ಕೂಡ ಕಾಣಬಹುದು. ಮಜ್ಜಿಗೆ ಬಳಸುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಹಾಗಾಗಿ ನೀವು ವಾರದಲ್ಲಿ ಕನಿಷ್ಠ ಒಮ್ಮೆ ಆದ್ರೂ ಮಜ್ಜಿಗೆಯನ್ನು ಚೆನ್ನಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ಎಷ್ಟು ದೃಢವಾಗುತ್ತೆ ನೀವೇ ನೋಡಿ.