ಕಾಸರಗೋಡು: ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಪರಿಪಾಲನೆ ಬಗ್ಗೆ ವಿಶೇಷ ತರಗತಿ ಕಾಸರಗೋಡು ಪರೆಸ್‍ಕ್ಲಬ್‍ನಲ್ಲಿ ಜರುಗಿತು. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಕಾಸರಗೋಡಿನ ಪತ್ರಕರ್ತರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಘಟನೆ ರಾಜ್ಯ ಸಮಿತಿ ಸದಸ್ಯ ಡಾ.ಎ.ವಿ.ಭರತನ್ ತರಗತಿ ಉದ್ಘಾಟಿಸಿ ಮಾತನಾಡಿ, ಹೃದಯದ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಕಾಳಜಿ ವಹಿಸಬೇಕು. ನಿಯಮಿತ ವ್ಯಾಯಾಮ, ಆಹಾರ ಕ್ರಮ, ಒತ್ತಡರಹಿತ ಜೀವನದಿಂದ ಹೃದ್ರೋಗ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭ ಹೃದಯಾಘಾತದ ಪ್ರಥಮ ಚಿಕಿತ್ಸೆ ಕುರಿತು ತರಗತಿ ನೀಡಲಾಯಿತು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ನಹಾಸ್.ಪಿ.ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಡಾ.ನಾರಾಯಣ ನಾಯ್ಕ್, ಡಾ.ಕೃಷ್ಣನಾಯ್ಕ್ ಮತ್ತು ಡಾ.ಅನೂಪ್ ತರಗತಿ ನಡೆಸಿದರು. ಡಾ.ಗಣೇಶ್ ಮೈಯ್ಯ, ಡಾ.ಟಿ.ಟಿ.ಕಾಸಿಂ, ಪ್ರೆಸ್‍ಕ್ಲಬ್ ಪದಾಧಿಕಾರಿಗಳಾದ ಪ್ರದೀಪ್ ನಾರಾಯಣನ್, ಅಬ್ದುಲಕುಞ ಉದುಮ ಉಪಸ್ಥಿತರಿದ್ದರು.