ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‍ಗಳಲ್ಲಿ ವಿವಿಧ ವಿಷಯಗಳಲ್ಲಿ ಕೆಲವೊಂದು ಸೀಟುಗಳು ಖಾಲಿ ಇದ್ದು, ಸೇರ್ಪಡೆಗಾಗಿ ಸಂದರ್ಶನ ಸೆ. 18ರಂದು ಬೆಳಗ್ಗೆ 10.30ಕ್ಕೆ ಕಾಲೇಜು ಕಚೇರಿಯಲ್ಲಿ ನಡೆಯಲಿದೆ.
ಎಂ.ಎಸ್ಸಿ ಕೆಮಿಸ್ಟ್ರಿ ಪರಿಶಿಷ್ಟ ಜಾತಿ (2), ಎಂ.ಎಸ್ಸಿ ಫಿಸಿಕ್ಸ್ ಪರಿಶಿಷ್ಟ ಜಾತಿ (2), ಪರಿಶಿಷ್ಟ ವರ್ಗ (1), ಎಂ.ಎಸ್ಸಿ ಜಿಯಾಲಜಿ ಪರಿಶಿಷ್ಟ ಜಾತಿ (2), ಪರಿಶಿಷ್ಟ ವರ್ಗ (1), ಎಂ.ಎಸ್ಸಿ ಮ್ಯಾಥಮೆಟಿಕ್ಸ್ ಪರಿಶಿಷ್ಟ ಜಾತಿ (2), ಪರಿಶಿಷ್ಟ ವರ್ಗ (1), ಎಂ.ಎ ಅರೇಬಿಕ್ ಪರಿಶಿಷ್ಟ ಜಾತಿ (2), ಪರಿಶಿಷ್ಟ ವರ್ಗ (1), ಎಂ.ಎ ಇಕನೋಮಿಕ್ಸ್ ಪರಿಶಿಷ್ಟ ಜಾತಿ (3), ಎಂ.ಎ ಇಂಗ್ಲಿಷ್ ಪರಿಶಿಷ್ಟ ಜಾತಿ (1). ಅರ್ಹ ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.