ಕಾಸರಗೋಡು : ಐ ಎಂ ಎ ಕಾಸರಗೋಡು ಘಟಕದ ವತಿಯಿಂದ ನಗರದ ಬೀರಂತಬೈಲು ಲಯನ್ಸ್ ಸಭಾಂಗಣದಲ್ಲಿ ಸೆ. 17ರಂದು ನಡೆದ ವೈದ್ಯರು ಮತ್ತು ಕುಟುಂಬದ ಸಾಂಸ್ಕೃತಿಕ ಸಮ್ಮಿಲನದಲ್ಲಿ ಹಿರಿಯ ಪತ್ರಕರ್ತ, ಲೇಖಕ, "ಕಣಿಪುರ " ಯಕ್ಷಗಾನ ಮಾಸಿಕದ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಐ ಎಂಎ ಕಾಸರಗೋಡು ಘಟಕದ ವೈದ್ಯರು ಇದೇ ಮೊದಲ ಬಾರಿಗೆ ನೀಡಿದ 'ನರಕಾಸುರ ಮೋಕ್ಷ "ಯಕ್ಷಗಾನ ಪ್ರದರ್ಶನದ ಬಳಿಕ ಗೌರವಾರ್ಪಣೆ ನಡೆಯಿತು.
ಕಳೆದ ಮೂರು ದಶಕಗಳಿಂದ ಕಲೆ, ಸಂಸ್ಕೃತಿ, ಸಾಹಿತ್ಯ ಮುಖಿಯಾಗಿ ಪತ್ರಿಕೋದ್ಯಮ ದಲ್ಲಿ ನಡೆಸಿದ ಸೇವೆ ಮಾನಿಸಿ ಈ ಗೌರವ ಸಲ್ಲಿಸಲಾಗಿದೆ.
ಐ. ಎಂ. ಎ ಕಾಸರಗೋಡು ಘಟಕ ಅಧ್ಯಕ್ಷ ಡಾ. ಗಣೇಶ ಮಯ್ಯ, ಕಾರ್ಯದರ್ಶಿ ಡಾ. ಖಾಸಿಂ, ಮತ್ತು ಯಕ್ಷಗಾನ ವೇಷದಲ್ಲಿರುವ ಡಾ. ನಾರಾಯಣ ನಾಯ್ಕ್, ಡಾ. ಜನಾರ್ಧನ ನಾಯ್ಕ್, ಡಾ. ಹರಿಕಿರಣ್ ಬಂಗೇರ, ಡಾ. ಕೆ. ಕೆ. ಶಾನುಭೋಗ್, ಡಾ. ಜಯಶ್ರೀ ನಾಗರಾಜ್, ಡಾ. ಮಾಯಾಮಲ್ಯ, ಡಾ. ಶ್ಯಾಮಲಾ, ಡಾ. ಜ್ಯೋತಿ ನಾರಾಯಣ ನಾಯ್ಕ್, ವಿಜಯಲಕ್ಷ್ಮಿ ಶಾನುಭಾಗ್ ಮತ್ತು ಕು. ಹಿಮಜಾ ಬಾಯಿ ಇವರ ಸಮಕ್ಷಮ ಗೌರವಾರ್ಪಣೆ ನಡೆಯಿತು.
ಐ ಎಂ ಎ ಪದಾಧಿಕಾರಿಗಳಾದ ಡಾ. ಸುಧಾ ಭಟ್, ಡಾ. ನೆಬೀಸಾ ಉಪಸ್ಥಿತರಿದ್ದರು.
ಕೇರಳದ ಐ ಎಂಎ ಘಟಕದಲ್ಲಿ ವೈದ್ಯರುಗಳಿಂದಲೇ ಯಕ್ಷಗಾನ ಪ್ರದರ್ಶನ ನಡೆದದ್ದು ಇದೇ ಮೊದಲಬಾರಿಯಾಗಿದೆ. ಕಿಶೋರ್ ಕೂಡ್ಳು ಮತ್ತು ರಂಜಿತ್ ಗೋಳಿಯಡ್ಕ ಇವರ ತರಬೇತಿ ಮತ್ತು ಮಾರ್ಗದರ್ಶನ ದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.