ಕಾಸರಗೋಡು: ಕೇಂದ್ರ ಗೃಹ ಸಚಿವಾಲಯದ ಸೂಚನೆಯನ್ವಯ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ನಿಟ್ಟಿನಲ್ಲಿ ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆ(ಆರ್‍ಎಎಫ್)ಕಾಸರಗೋಡಿಗೆ ಆಗಮಿಸಿದ್ದು, ವಿವಿಧೆಡೆ ಪಥ ಸಂಚಲನ ನಡೆಸಿತು.
ರಾಜ್ಯದ ಸಂಘರ್ಷ ಬಾಧಿತ ಪ್ರದೇಶಗಳಲ್ಲಿ ಕೇಂದ್ರ ಪಡೆಗಳು ರೂಟ್ ಮಾರ್ಚ್ ನಡೆಸುತ್ತಿವೆ. ಪೆÇಲೀಸ್ ಠಾಣೆಗಳ ಸಂಖ್ಯೆ, ಜನಸಂಖ್ಯೆ ಮತ್ತು ಸಮಸ್ಯೆ ಆಧರಿಸಿ ಸೂಕ್ಷ್ಮ ಪ್ರದೇಶಗಳನ್ನು ನಿರ್ಧರಿಸಲಾಗುತ್ತದೆ. ರಾಜಕೀಯ, ಧಾರ್ಮಿಕ ಮುಖಂಡರು, ಈ ಹಿಂದಿನ ಸಂಘರ್ಷಬಾಧಿತ ಪ್ರದೇಶಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಕೇಂದ್ರ ಕ್ಷಿಪ್ರ ಕಾರ್ಯ ಪಡೆ ಏಳು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀಡು ಬಿಡಲಿದೆ.
ಧಾರ್ಮಿಕ, ಕೋಮು ಪೈಪೆÇೀಟಿ ಮತ್ತು ರಾಜಕೀಯ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಖಚಿತಪಡಿಸಿಕೊಳ್ಳುವ ಮತ್ತು ಸಾರ್ವಜನಿಕರಲ್ಲಿ ಭರವಸೆ ಮುಡಿಸುವ ನಿಟ್ಟಿನಲ್ಲಿ ಪಥಸಂಚಲನ ಆಯೋಜಿಸಲಾಗಿದೆ. ಕಾಸರಗೋಡು ಜಿಲ್ಲಾ ಸಹಾಯಕ ಕಮಾಂಡೆಂಟ್ ಎಂ ಭಾರತಿ ನೇತೃತ್ವದ 68 ಮಂದಿ ಆರ್‍ಪಿಎಫ್ ಯೋಧರಿದ್ದಾರೆ. ಕೇಂದ್ರ ಕ್ಷಿಪ್ರ ಕಾರ್ಯಪಡೆಯ ಚೆನ್ನೈ 97ನೇ ಬೆಟಾಲಿಯನ್ ಯೋಧರೊಂದಿಗೆ ಕಾಸರಗೋಡು ಪೆÇಲೀಸರೂ ಜತೆಗಿದ್ದಾರೆ. ಕಾಸರಗೋಡು ಹೊಸ ಬಸ್ ನಿಲ್ದಾಣ, ವಿದ್ಯಾನಗರ, ಕಾಞಂಗಾಡು ಮುಂತಾದೆಡೆ ಪಥಸಂಚಲನ ನಡೆಸಲಾಯಿತು.