HEALTH TIPS

ಟೊಮೆಟೊ ರಹಿತ ರಸಂ ವೈವಿಧ್ಯ!

                 ಟೊಮೆಟೊ ಇಲ್ಲದೆ ಅಡುಗೆಯೇ ಸಾಧ್ಯವಿಲ್ಲ ಎನ್ನುವ ಅಷ್ಟರಮಟ್ಟಿಗೆ ಅದರ ಬಳಕೆ ಸಾರ್ವತ್ರಿಕವಾಗಿದೆ. ಹುಳಿ ಆದ್ಯತೆಗೆ ಟೊಮೆಟೊ ಬೇಕೇ ಬೇಕು. ಟೊಮೊಟೊ ಇಲ್ಲದೇ ಹೇಗಪ್ಪ ಅಡುಗೆ ಮಾಡೋದು ಅಂತ ಯೋಚಿಸ್ತಿದ್ದೀರಾ? ಚಿಂತೆ ಬಿಡಿ. ಟೊಮೊಟೊ ಹಣ್ಣಿನಂತೆ ಹುಳಿ ಸ್ವಾದವನ್ನ ನೀಡುವ ಹಲವು ಬಗೆಯ ಹಣ್ಣು‌ಗಳು ನಮ್ಮ ಸುತ್ತ ಲಭ್ಯವಿದೆ.


                ಇವನ್ನೆ ಬಳಸಿ ರುಚಿಕರ ರಸಂ ತಯಾರಿಸಬಹುದು. ಅಂಥ ಕೆಲವು ರೆಸಿಪಿಗಳನ್ನು ಸೌಖ್ಯ ಮೋಹನ್‌ ತಲಕಾಲುಕೊಪ್ಪ ಇಲ್ಲಿ ಪರಿಚಯಿಸಿದ್ದಾರೆ.

ನೀರು ಮಾವಿನ ಕಾಯಿ ಸಾರು

  ನೀರು ಮಾವಿನ ಕಾಯಿ ಸಾರು:

           ಸಾಮಗ್ರಿ: ನೀರು ಮಾವಿನ ಕಾಯಿ ಅರ್ಧ ತೆಂಗಿನಕಾಯಿ ಹಸಿಮೆಣಸುಎರಡು ಉಪ್ಪು ಬೆಲ್ಲ ಬೆಳ್ಳುಳ್ಳಿ ರಸಂ ಪೌಡರ್ ಕರಿಬೇವು ಒಗ್ಗರಣೆಗೆಸಾಸಿವೆ ಜೀರಿಗೆ ಮತ್ತು ಒಣ ಮೆಣಸು

           ವಿಧಾನ : ಮೊದಲು ಒಗ್ಗರಣೆಗೆ ಎಲ್ಲಾ ಪದಾರ್ಥಗಳನ್ನು ಹಾಕಿ. ಬೆಳ್ಳುಳ್ಳಿ ಮತ್ತುಹಸಿಮೆಣಸನ್ನು ಜಜ್ಜಿ ಹಾಕಿ. ನಂತರ ಸಿಪ್ಪೆ ಸಮೇತವಾಗಿ ನುರಿದು ಅಥವಾಚಿಕ್ಕದಾಗಿ ಕತ್ತರಿಸಿ ಹಾಕಿ ಹುರಿಯಿರಿ. ನೀರು ಹಾಕಿ ಕುದಿಸಿ. ಅರಿಶಿಣ ಉಪ್ಪುಮತ್ತು ಬೆಲ್ಲ ಹಾಕಿ. ಉಪ್ಪನ್ನು ನೋಡಿಕೊಂಡು ಹಾಕಿ ಯಾಕೆಂದರೆ ನೀರುಮಾವಿನ ಕಾಯಿಯಲ್ಲಿ ಉಪ್ಪಿನ ಅಂಶ ಇರುತ್ತದೆ. ಆಮೇಲೆ ತೆಂಗಿನಕಾಯಿಮತ್ತು ರಸಂ ಪೌಡರ್ ನ್ನು ಅದಕ್ಕೆ ಸೇರಿಸಿ ಕುದಿಸಿ . ಮಾವಿನ ಕಾಯಿಯನ್ನುಸ್ವಲ್ಪ ಬೇಯಿಸಿ ಉಪ್ಪು ನೀರಿನಲ್ಲಿ ಹಾಕಿಟ್ಟುಕೊಂಡರೆ ನಿಮಗೆ ಬೇಕಾದಾಗರಸಂ ತಯಾರಿಸಿಕೊಳ್ಳಬಹುದು

ಮೆಂತೆ ಹುಣಸೆ ಸಾರು

                ಸಾಮಗ್ರಿಗಳು : ಮೆಂತೆ ಒಂದೂವರೆ ಚಮಚ ಮೆಣಸಿನ ಪುಡಿ ಕಾಯಿತುರಿಅರ್ಧ ಕಪ್ ಹುಣಸೆಹಣ್ಣು ಸ್ವಲ್ಪ ಕರಿಬೇವು ಅರಿಶಿನಪುಡಿ ಉಪ್ಪು ಬೆಲ್ಲ ಒಣ ಮೆಣಸು ಎರಡು ಒಗ್ಗರಣೆಗೆ ಎಣ್ಣೆ ಜೀರಿಗೆ ಸಾಸಿವೆ

                  ವಿಧಾನ: ಮೊದಲು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆದುಕೊಳ್ಳಿ.ಒಗ್ಗರಣೆಗೆ ಇಟ್ಟು ಸಾಸಿವೆ ಸಿಡಿದ ನಂತರ ಮೆಂತೆ ಮತ್ತು ಒಣಮೆಣಸು ಹಾಕಿಹುರಿಯಿರಿ. ನಂತರ ಅದಕ್ಕೆ ನೀರು ಹಾಕಿ ಉಪ್ಪು ಬೆಲ್ಲ ಅರಿಶಿನ ಪುಡಿ ಸೇರಿಸಿಕುದಿಸಿ. ಮೆಂತೆ ಕಾಳು ಚೆನ್ನಾಗಿ ಬೇಯಬೇಕು. ನಂತರ ಹುಣಸೆರಸ ಹಾಕಿ.ತೆಂಗಿನ ತುರಿ ಸಾರಿನಪುಡಿ ಮೆಣಸಿನಕಾಯಿ ಹಾಕಿ ನುಣ್ಣನೆ ರುಬ್ಬಿ. ಅದನ್ನುಕುದಿಯುವ ಸಾರಿಗೆ ಹಾಕಿ. ಕರಿಬೇವು ಹಾಕಿ ಕುದಿಸಿ ಇಳಿಸಿ. ಮಳೆಗಾಲಕ್ಕೆಸೂಕ್ತವಾದ ಸಾರು. ಇಂತಹ ಸಾರುಗಳನ್ನು ಮನೆಯಲ್ಲೇ ಇರುವ ವಸ್ತುಗಳಿಂದತಯಾರಿಸಬಹುದು.

ಪುನರ್ಪುಳಿ ಅಥವಾ ಕೋಕಮ್ ಸಾರು

  ಪುನರ್ಪುಳಿ ಅಥವಾ ಕೋಕಮ್ ಸಾರು:

          ಸಾಮಗ್ರಿಗಳು : ಪುನರ್ಪುಳಿ ಸಿಪ್ಪೆ 5-6 ತೆಂಗಿನಕಾಯಿ ತುರಿ ಅರ್ಧ ಕಪ್ಸಾರಿನ ಪುಡಿ ಒಂದು ಚಮಚ ಕರಿ ಮೆಣಸಿನ ಪುಡಿ ಅರ್ಧ ಚಮಚ ಅರಿಶಿನಪುಡಿ ಉಪ್ಪು ಬೆಲ್ಲ ಮತ್ತು ಕರಿಬೇವು

              ವಿಧಾನ : ಮೊದಲು ಒಣಗಿದ ಕೋಕಂ ಸಿಪ್ಪೆಯನ್ನು ನೀರಿನಲ್ಲಿ ನೆನೆಸಿಕೊಳ್ಳಿ.ನಂತರ ತೆಂಗಿನ ಕಾಯಿ ತುರಿಯನ್ನು ರುಬ್ಬಿ ಹಾಲನ್ನು ತೆಗೆದಿಟ್ಟುಕೊಳ್ಳಿ.ಆಮೇಲೆ ಒಗ್ಗರಣೆಗೆ ಎಲ್ಲಾ ಸಾಮಾನುಗಳನ್ನು ಹಾಕಿ ಕರಿಮೆಣಸಿನ ಪುಡಿಸೇರಿಸಿ. ಸ್ವಲ್ಪ ನೀರು ಹಾಕಿ ಕುದಿಸಿ. ಅದಕ್ಕೆ ಸಾರಿನ ಪುಡಿ ಅರಿಶಿನ ಪುಡಿಹಾಕಿ ನಂತರ ಕೋಕಮ್ ಸಿಪ್ಪೆಯನ್ನು ಕಿವುಚಿ ಅದರ ರಸವನ್ನು ತೆಗೆದುಸೇರಿಸಿ. ನಂತರ ತೆಂಗಿನಕಾಯಿ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ .ಕುದಿಯುವಾಗ ಉಪ್ಪು ಬೆಲ್ಲ ಹಾಕಿ. ಒಣಗಿದ ಪುನರ್ಪುಳಿ ಸಿಪ್ಪೆಯನ್ನು ತಂದಿಟ್ಟುಕೊಂಡರೆ ವರ್ಷವಿಡಿ ಬಳಸಬಹುದು ಈ ರಸಂ ಅನ್ನಕ್ಕೂ ರುಚಿಪಿತ್ತದ ಸಮಸ್ಯೆಗೂ ಬಹಳ ಒಳ್ಳೆಯದು

ನೆಲ್ಲಿಕಾಯಿ ರಸಂ

 ನೆಲ್ಲಿಕಾಯಿ ರಸಂ

ಸಾಮಗ್ರಿಗಳು: ನೆಲ್ಲಿಕಾಯಿ 3 ತೆಂಗಿನ ತುರಿ ಅರ್ಧ ಕಪ್ ಸಾರಿನ ಪುಡಿಒಂದು ಚಮಚ ಖಾರದಪುಡಿ ಕೊತ್ತುಂಬರಿ ಸೊಪ್ಪು ಬೆಲ್ಲ ಉಪ್ಪು ಅರಿಶಿಣಪುಡಿ. ಒಗ್ಗರಣೆಗೆ ಎಣ್ಣೆ ಮೂರು ಚಮಚ ಜೀರಿಗೆ ಒಣಮೆಣಸು ಕರಿಬೇವುಸಾಸಿವೆ ಬೆಳ್ಳುಳ್ಳಿ ಅಥವಾ ಇಂಗು

ವಿಧಾನ : ಇದರಿಂದ ರುಚಿಕರವಾದ ಆರೋಗ್ಯಕರವಾದ ರಸಂತಯಾರಿಸಬಹುದು. ಮೊದಲು ನೆಲ್ಲಿಕಾಯಿ ಕತ್ತರಿಸಿ ಬೀಜ ತೆಗೆದುಕೊಳ್ಳಿ.ಅದಕ್ಕೆ ತೆಂಗಿನತುರಿ ಮತ್ತು ಒಂದು ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಸಾರಿನ ಪುಡಿಕಾರದಪುಡಿ ಅರಿಶಿನ ಪುಡಿ ಉಪ್ಪು ಬೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕುದಿಸಿ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿ ಹಾಕಿ ಕೊನೆಯಲ್ಲಿ ಒಗ್ಗರಣೆ ಕೊಡಿ .ಇದಕ್ಕೆ ಇಂಗು ಅಥವಾ ಬೆಳ್ಳುಳ್ಳಿ ಸೇರಿಸಿಕೊಳ್ಳಬಹುದು. ಟೊಮ್ಯಾಟೋ ಇಲ್ಲದರಸಂ ತಯಾರಿಸಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries