HEALTH TIPS

ಕಾನೂನನ್ನು ಸರಳವಾಗಿ ಸ್ಥಳೀಯ ಭಾಷೆಗಳಲ್ಲಿ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಮೋದಿ

           ವದೆಹಲಿ: ಕಾನೂನುಗಳನ್ನು ಆದಷ್ಟು ಸರಳವಾಗಿ ಹಾಗೂ ಭಾರತೀಯ ಭಾಷೆಗಳಲ್ಲಿ ರೂಪಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

             ಅಂತರರಾಷ್ಟ್ರೀಯ ವಕೀಲರ ಸಮಾವೇಶದಲ್ಲಿ ಮಾತನಾಡಿದ ಅವರು, 'ಕಾನೂನುಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಹೇಳಿದರು.

              'ಎಲ್ಲರಿಗೂ ಕಾನೂನು ಅರ್ಥವಾಗುವಂತೆ ಇರಬೇಕು. ಹೀಗಾಗಿ, ಕಾನೂನುಗಳನ್ನು ಎರಡು ರೀತಿಯಲ್ಲಿ ರೂಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ವಕೀಲ ವೃತ್ತಿಯಲ್ಲಿ ತೊಡಗಿದವರಿಗೆ ಅನುವಾಗುವಂತೆ ರಚಿಸುವುದು ಒಂದು ಭಾಗವಾದರೆ, ದೇಶದ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕಾನೂನುಗಳನ್ನು ರಚಿಸುವುದು ಮತ್ತೊಂದು ವಿಧಾನವಾಗಿರಲಿದೆ' ಎಂದು ವಿವರಿಸಿದರು.

'ಕಾನೂನುಗಳನ್ನು ಸಂಕೀರ್ಣವಾದ ಭಾಷೆಯಲ್ಲಿ ರೂಪಿಸುವ ರೂಢಿ ಇದೆ. ಇದರ ಬದಲಾಗಿ, ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ಅವುಗಳ ರಚನೆ ಇರಬೇಕು' ಎಂದರು.

'ನ್ಯಾಯ ದಾನ ವ್ಯವಸ್ಥೆ ಕುರಿತು ಮಾತನಾಡುವ ಸಂದರ್ಭಗಳಲ್ಲಿ, ಕಾನೂನು ರಚನೆಗೆ ಬಳಸುವ ಭಾಷೆ ಮತ್ತು ‌ಅದು ಎಷ್ಟು ಸರಳವಾಗಿರಬೇಕು ಎಂಬುದರ ಬಗ್ಗೆ ಬಹಳ ಕಡಿಮೆ ಚರ್ಚೆ ನಡೆಯುತ್ತದೆ' ಎಂದೂ ಹೇಳಿದರು.

             'ಬಹಳಷ್ಟು ಕೆಲಸವಾಗಬೇಕಿದ್ದು, ಇದಕ್ಕೆ ಸಮಯವೂ ಹಿಡಿಯುತ್ತದೆ. ಹೀಗಾಗಿ ನನ್ನ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ' ಎಂದು ಹೇಳುವ ಮೂಲಕ ತಮ್ಮ ಮುಂದಿನ ಯೋಜನೆಗಳ ಕುರಿತು ಸೂಚ್ಯವಾಗಿ ಪ್ರಸ್ತಾಪಿಸಿದರು.

                   ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಕೇಂದ್ರ ಕಾನೂನು ಸಚಿವ ಅರ್ಜುನ್‌ರಾಮ್ ಮೇಘವಾಲ್, ಬ್ರಿಟನ್‌ನ ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ಅಲೆಕಸ್‌ ಚಾಕ್‌ ಕೆಸಿ, ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ, ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ, ಭಾರತೀಯ ವಕೀಲರ ಸಂಘದ ಅಧ್ಯಕ್ಷ ಮನನ್‌ಕುಮಾರ್‌ ಮಿಶ್ರಾ ಮತ್ತಿತರರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries