ನವದೆಹಲಿ: ಭಾರತೀಯ ಸೇನೆ ಭವಿಷ್ಯದಲ್ಲಿ ಇನ್ನೂ ಪ್ರಳಯಾಂತಕ ಎನಿಸಿಕೊಳ್ಳಲಿದೆ. ಅರ್ಥಾತ್, 'ಪ್ರಳಯ್' ಯುದ್ಧ ಕ್ಷಿಪಣಿಗಳ ಖರೀದಿ ಕುರಿತ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ.
ನವದೆಹಲಿ: ಭಾರತೀಯ ಸೇನೆ ಭವಿಷ್ಯದಲ್ಲಿ ಇನ್ನೂ ಪ್ರಳಯಾಂತಕ ಎನಿಸಿಕೊಳ್ಳಲಿದೆ. ಅರ್ಥಾತ್, 'ಪ್ರಳಯ್' ಯುದ್ಧ ಕ್ಷಿಪಣಿಗಳ ಖರೀದಿ ಕುರಿತ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ.
150ರಿಂದ 500 ಕಿ.ಮೀ. ನಡುವಿನ ಗುರಿಗಳನ್ನು ಹೊಡೆಯಬಲ್ಲ ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರೆಜಿಮೆಂಟ್ ತನ್ನದಾಗಿಸಿಕೊಳ್ಳುವ ಪ್ರಸ್ತಾವನೆಯನ್ನು ಇತ್ತೀಚೆಗೆ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ.
ಸೇನೆಯು ಈ ಕ್ಷಿಪಣಿಗಳನ್ನು ಸಾಂಪ್ರದಾಯಿಕ ಯುದ್ಧತಂತ್ರಗಳ ಜೊತೆಗೇ ಬಳಸಿಕೊಳ್ಳಲಿದೆ. ಭಾರತೀಯ ವಾಯುಪಡೆಗೆ ಇದೇ ರೀತಿಯ ಪ್ರಸ್ತಾಪವನ್ನು ಸರ್ಕಾರ ಒಪ್ಪಿದ್ದ ಬೆನ್ನಲ್ಲೇ ಈ ಕ್ಷಿಪಣಿಗಳನ್ನು ಖರೀದಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರೆಜಿಮೆಂಟ್ಅನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಗಳ ಎಲ್ಒಸಿಗಳಲ್ಲಿ ನಿಯೋಜಿಸಲಾಗುವುದು ಎಂದೂ ಸೇನಾ ಮೂಲಗಳು ತಿಳಿಸಿವೆ. ಈ ಕ್ಷಿಪಣಿಗಳನ್ನು ಕಳೆದ ವರ್ಷದ ಡಿ. 21 ಮತ್ತು 22ರಂದು ಪರೀಕ್ಷಿಸಿದ್ದು, ಯಶಸ್ವಿ ಫಲಿತಾಂಶ ಲಭಿಸಿತ್ತು.